ಹಂದಿ ದಾಳಿಗೆ ಕಂದಮ್ಮ ಬಲಿ

ಭಾನುವಾರ, 14 ಅಕ್ಟೋಬರ್ 2018 (15:50 IST)
ಮನೆ ಅಂಗಳದಲ್ಲಿ ಆಡವಾಡುತ್ತಿದ್ದ ಮಗುವನ್ನು ಹಂದಿಗಳು ಬಲಿಪಡೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಅಟ್ಯಾಕ್ ಮಾಡಿದ ಹಂದಿ ಹಿಂಡು ಮುದ್ದು ಮಗುವನ್ನು ಬಲಿ ತೆಗೆದುಕೊಂಡ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಬನ್ನಿಗಿಡ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಎರಡು ವರ್ಷದ  ರಿಹಾನ್ ಹಂದಿದಾಳಿಗೊಳಗಾಗಿ ಸಾವನ್ನಪ್ಪಿದ ಮಗುವಾಗಿದ್ದಾನೆ.

ಮಗು ಸಾವಿನ ಹಿನ್ನಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಂದಿಗಳನ್ನು ಬಡಾವಣೆಗಳಿಂದ ಸ್ಥಳಂತರಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಹಂದಿಗಳ ಮಾಲಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ