ಹೆದ್ದಾರಿ ದಾಟಿ ದುಸ್ಥಿತಿಯಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳು

ಬುಧವಾರ, 11 ಜುಲೈ 2018 (15:24 IST)
ರಾಜ್ಯದಗಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಗರಗನಹಳ್ಳಿ ಗ್ರಾಮದ ಮಕ್ಕಳು ನಿತ್ಯವೂ ಶಾಲೆಗೆ ಹೋಗಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಪಾಯಕ್ಕೆ ಅಹ್ವಾನ ನೀಡುವ ರಾಷ್ಟ್ರೀಯ ಹೆದ್ದಾರಿಯನ್ನ ದಾಟಿ ಶಾಲೆಗೆ ಸೇರಬೇಕಾದ ಪರಿಸ್ಥಿತಿ ಈ ಗ್ರಾಮದ ಮಕ್ಕಳಿಗಿದೆ.1 ರಿಂದ 5 ನೇ ತರಗತಿವರೆಗೆ ಗರಗನಹಳ್ಳಿ ಶಾಲೆಯಲ್ಲಿ ಓದಿ ನಂತ್ರದ ವಿದ್ಯಾಭ್ಯಾಸಕ್ಕಾಗಿ ಪಕ್ಕದ ಅಗತಗೌಡನಹಳ್ಳಿ ಗ್ರಾಮದ ಶಾಲೆಗೆ ಹೋಗಬೇಕಾಗಿದೆ.

ಆ ಶಾಲೆಯ ಮಾರ್ಗ ಮಧ್ಯದ ರಾಷ್ಟ್ರೀಯ ಹೆದ್ದಾರಿ 212 ದಾಟಿ ಶಾಲೆಗೆ ಹೋಗಲು ಹರಸಾಹಾಸ ಪಡುವಂತಾಗಿದೆ. ಹೆದ್ದಾರಿ ದಾಟಿದ ನಂತ್ರ ಹೊಲ ಗದ್ದೆಗಳ ನಡುವೆ 1.5 ಕಿಲೋ ಮೀಟರ್ ಸಾಗಿ ಅನಂತ್ರ ಶಾಲೆಗೆ ಸೇರಬೇಕು. ಹೆದ್ದಾರಿಯಲ್ಲಿ ವಾಹನಗಳ ಸಂಚಾರವಿದ್ದರೂ ಕೂಡ  ಸಮಯಕ್ಕೆ ಸರಿಯಾಗಿ ಶಾಲೆ ತಲುಪಬೇಕಾದ ಮಕ್ಕಳು ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ. ಸರ್ಕಾರಿ ಶಾಲೆಗೆ ಮಕ್ಕಳು ಬರುವುದೇ ಕಷ್ಟದ ಪರಿಸ್ಥಿತಿಯಲ್ಲಿ ಈ ಮಕ್ಕಳ ಗೋಳು ಕೇಳುವರ್ಯಾರು...? ಎಂಬ ಪ್ರಶ್ನೆ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ