ಜೈಲಿನಲ್ಲಿ ಗೋಶಾಲೆ ತೆರೆಯುವ ನಿರ್ಧಾರ ಮಾಡಿದ ಯುಪಿ ಸರ್ಕಾರ

ಶನಿವಾರ, 7 ಜುಲೈ 2018 (12:29 IST)
ಲಖನೌ : ಗೋ ಸಂರಕ್ಷಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಸ ಯೋಜನೆಯೊಂದನ್ನು ಕೈಗೊಂಡಿದ್ದು ಆ ಮೂಲಕ ಜೈಲಿನಲ್ಲಿ ಗೋಶಾಲೆಗಳನ್ನು ತೆರೆಯುವ ನಿರ್ಧಾರ ಕೈಗೊಂಡಿದೆ.


ಪ್ರಾಥಮಿಕವಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಜೈಲುಗಳಲ್ಲಿ ಹಸು ಸಾಕಣೆ ಮಾಡಲಾಗುತ್ತಿದ್ದು, ಅದಕ್ಕಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರ 2 ಕೋಟಿ ಹಣವನ್ನು ಮೀಸಲಿಟ್ಟಿದೆ.

ಈ ಯೋಜನೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಹಿಂದೂ ಪರ ಸಂಘಟನೆಗಳು ಯೋಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ ಹಾಗೂ ಅಭಿನಂಧನೆಗಳನ್ನು ತಿಳಿಸಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ