ಅಪ್ರಾಪ್ತೆಯ ಮದುವೆಯಾಗಿ ಸಿಕ್ಕಿಬಿದ್ದ ಇಬ್ಬರು ಮಕ್ಕಳ ತಂದೆ
10 ನೇ ತರಗತಿ ಓದುತ್ತಿದ್ದ ಬಾಲಕಿ ಕೆಲವು ದಿನಗಳಿಂದ ಶಾಲೆಗೆ ಬರುತ್ತಿರಲಿಲ್ಲ. ಶಿಕ್ಷಕರು ಪೋಷಕರಿಗೆ ಸೂಚಿಸಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಬಾಲಕಿಯ ಮನೆಗೆ ಭೇಟಿ ನೀಡಿದಾಗ ಮೂರು ತಿಂಗಳ ಹಿಂದೆ ಪೋಷಕರೇ ಇಬ್ಬರು ಮಕ್ಕಳ ತಂದೆಗೆ ಮದುವೆ ಮಾಡಿಕೊಟ್ಟಿರುವುದು ಬಯಲಾಗಿದೆ.
ಈ ಸಂಬಂಧ ಶಿಕ್ಷಕರೇ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಮೊದಲನೇ ಹೆಂಡತಿ ತೀರಿಕೊಂಡಿದ್ದ, ಇಬ್ಬರು ಮಕ್ಕಳ ತಂದೆಯ ಜೊತೆ ಮದುವೆ ಮಾಡಿಸಿರುವುದು ಗೊತ್ತಾಗಿದೆ. ಈ ಸಂಬಂಧ ಈಗ ಪೋಷಕರು ಮತ್ತು ಪತಿಯನ್ನು ಬಂಧಿಸಲಾಗಿದೆ.