ಚೌಕಿದಾರ್ ಕಾರ್ಪೋರೇಟ್ ಸಂಸ್ಥೆಗಳಿಗೆ ಹಣ ಹಂಚುತ್ತಿದ್ದಾರಂತೆ…!
ಸೋಮವಾರ, 18 ಮಾರ್ಚ್ 2019 (14:10 IST)
ಮೋದಿಯಿಂದ ನಡೆಯುತ್ತಿರುವ ಮೈ ಚೌಕೀದಾರ್ ಅಭಿಯಾನಕ್ಕೆ ಕಾಂಗ್ರೆಸ್ ಕಿಡಿಕಾರಿದೆ.
ಚೌಕಿದಾರ್ ಎಂದು ಹೇಳಿಕೊಳ್ಳುವ ಮೋದಿ, ಜನರ ಹಣ ಲೂಟಿ ಮಾಡಿ ಕಾರ್ಪೋರೇಟ್ ಸಂಸ್ಥೆಗಳಿಗೆ ಹಂಚುತ್ತಿದ್ದಾರೆ.
ಅದಕ್ಕಾಗಿಯೇ ನಾವು ಚೌಕಿದಾರ್ ಚೋರ್ ಹೈ ಎಂದು ಹೇಳುತ್ತಿರೋದು. ಇದೀಗ ಮೈ ಚೌಕಿದಾರ್ ಎಂದು ತನಗೆ ತಾನೇ ನಾಮಕರಣ ಮಾಡಿಕೊಂಡಿದ್ದಾನೆ. ತನಗೆ ತಾನು ಏನು ಬೇಕಾದರೂ ಹೆಸರಿಟ್ಟುಕೊಳ್ಳಲಿ. ಆದರೆ ಈ ಚೌಕಿದಾರ ದೇಶದ ರಕ್ಷಣೆ ಮಾಡಬೇಕಿತ್ತು. ಬದಲಿಗೆ ದೇಶದ ಹಣವನ್ನು ಕೊಳ್ಳೆ ಹೊಡೆದು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾನೆ. ಹೀಗಂತ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಚುನಾವಣೆ ಬಂದಿದೆ ಎಂದು ರೈತರ ಖಾತೆಗಳಿಗೆ ಎರಡು ಸಾವಿರ ಹಣ ಬಿಡುಗಡೆಗೊಳಿಸಿದ್ದಾರೆ. ಒಬ್ಬ ರೈತನಿಗೆ ಪ್ರತಿ ದಿನಕ್ಕೆ 16.40 ರೂಪಾಯಿ ಸಿಗಲಿದೆ. ಇದರಿಂದ ಒಂದು ಚಹಾನೂ ಸಿಗೋದು ಕಷ್ಟ. ತಾನು ರೈತ ಪರ ಎಂದು ಹೇಳಿಕೊಳ್ಳುತ್ತಲೇ ಕಾರ್ಪೋರೇಟ್ ಸಂಸ್ಥೆಗಳ ಪರ ನಿಲ್ಲುತ್ತಾರೆ ಎಂದು ಟೀಕಿಸಿದ್ರು.
ಹೀಗಿರಬೇಕಾದರೆ ಮೈ ಚೌಕಿದಾರ್ ಎಂದು ಹೇಳಿಕೊಳ್ಳೋದ್ರಲ್ಲಿ ಯಾವುದೇ ಅರ್ಥವಿಲ್ಲ ಅಂತ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾಡಿದರು.