ಸ್ವಚ್ಛತೆಯೇ ಸೇವೆ ಎಂಬ ಸಂಕಲ್ಪದೊಂದಿಗೆ ಗಡಿನಾಡು ಹಾಗೂ ಗಣಿನಾಡಿನಲ್ಲಿ ಜನಾಂದೋಲನ ರೂಪಿಸಲಾಯಿತು.
ಬಳ್ಳಾರಿಯ ಶ್ರೀ ಸಂಗನಬಸವೇಶ್ವರ ದೇವಸ್ಥಾನದಿಂದ ನಗರದ ಬಸವೇಶ್ವರ ನಗರ, ನೆಹರು ಕಾಲೋನಿ, ರೇಣುಕಾಚಾರ್ಯ ನಗರ ಸೇರಿ ಹಲವು ಬಡಾವಣೆಗಳಲ್ಲಿ ಸಂಚರಿಸಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು, ಪೊರಕೆ ಹಿಡಿದು ಪ್ರತಿಯೊಬ್ಬರೂ ಬಡಾವಣೆಗಳನ್ನು ಸ್ವಚ್ಛಗೊಳಿಸುವಲ್ಲಿ ಕಾಳಜಿ ವಹಿಸಬೇಕೆಂದರು.
ಮೈಸೂರು, ಬೆಂಗಳೂರು ಮಾದರಿಯಲ್ಲಿ ಬಳ್ಳಾರಿಯೂ ಕೂಡ ಸ್ವಚ್ಛ ಹಾಗೂ ಹಸಿರು ನಗರಿಯನ್ನಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪಿಸಿರುವ ಈ ಕಾರ್ಯಕ್ರಮದಲ್ಲಿ ಸಹೋದರಿ ಬಿಕೆ ನಿರ್ಮಲಾ, ಯೋಗಿನಿ ರೂಪಾ ಸೇರಿದಂತೆ ಬಿಜೆಪಿಯ ಮುಖಂಡರಾದ ಎಸ್.ಗುರುಲಿಂಗನಗೌಡ, ಡಾ.ಎಸ್. ಜೆ. ವಿ. ಮಹಿಪಾಲ್, ಕೆ.ಎ. ರಾಮಲಿಂಗಪ್ಪ, ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್ ಮತ್ತು ನೂರಾರು ಬ್ರಹ್ಮಕುಮಾರಿ ಸಹೋದರ-ಸಹೋದರಿಯರು ಜಾಥಾ ನಡೆಸಿದ್ರು. ಎಲ್ಲ ನಾಯಕರು ಸಸಿಗೆ ನೀರುಣಿಸುವ ಮೂಲಕ ಪ್ರಕೃತಿ-ಪರಿಸರವನ್ನೂ ಕೂಡ ಕಾಪಾಡಿಕೊಳ್ಳಬೇಕಿದೆ ಎಂದರು.