ವೀರಶೈವ ಸಮಾಜವನ್ನ ತುಳಿಯುವ ಕೆಲಸ ಎಲ್ಲ ಸರ್ಕಾರಗಳಿಂದ ನಡೆಯುತ್ತಿದೆ. ಹೀಗಂತ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರೋಪ ಮಾಡಿದ್ದಾರೆ.
ರಾಜ್ಯದ ಗಣತಿ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು ವೀರಶೈವ ಲಿಂಗಾಯತ ಜನಸಂಖ್ಯೆ 83 ಲಕ್ಷ ಇದೆ. ಈ ಹಿಂದೆ ಲಿಂಗಾಯತರು ಎರಡು ಕೋಟಿ ಜನ ಸಂಖ್ಯೆ ಇತ್ತು ಎಂದು ದಾವಣಗೆರೆಯ ಹರಿಹರದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶಾಮನೂರ ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಸರಕಾರಗಳ ವಿರುದ್ಧ ಆರೋಪ ಮಾಡಿದ್ದು, ಈ ಹಿಂದೆ ಸಿರಿಗೆರೆ ಮಠದ ಸ್ವಾಮೀಜಿಗಳು ಚುನಾವಣೆಗಳಲ್ಲಿ 10 ರಿಂದ 15 ಜನರನ್ನ ಗೆಲ್ಲಿಸುತ್ತಿದ್ದರು. ನಂತರ ಸರ್ಕಾರ ಅವರು ಹೇಳಿದಂತೆ ಕೇಳುವಂತೆ ಮಾಡುತ್ತಿದ್ದರು. ಈಗಿನ ಸ್ವಾಮೀಜಿಗಳು ಸಹ ಇಂತಹ ಕೆಲಸ ಮಾಡಬೇಕಿದೆ. ವೀರಶೈವರಲ್ಲಿ ಪಂಚಮಸಾಲಿ ಜಾತಿ ಜನ 80 ಲಕ್ಷ ಅಂತಾರೆ. ಬಣಜಿಗರು 20 ಲಕ್ಷ ಜನಸಂಖ್ಯೆ ಇದೆ ಎನ್ನಲಾಗುತ್ತಿದೆ. ಆದ್ರೆ ಸರ್ಕಾರಿ ದಾಖಲೆಗಳ ಪ್ರಕಾರ ವೀರಶೈವ ಎಲ್ಲ ಜಾತಿಗಳು ಸೇರಿ 80 ಲಕ್ಷ ಜನಸಂಖ್ಯೆ ಇದೆ. ವೀರಶೈವ ಜಾಗೃತರಾಗಬೇಕು. ನಾನು ಕಾಂಗ್ರೆಸ್ ನಲ್ಲಿ ಇದ್ದರೂ ಸಹ ಸಮಾಜಕ್ಕೆ ಅನ್ಯಾಯ ಆಗಲು ಬಿಡಲ್ಲ ಎಂದು ಹೇಳಿದ್ದಾರೆ.