ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ, ಹಲವೆಡೆ ಮಳೆ

ಭಾನುವಾರ, 20 ಮಾರ್ಚ್ 2022 (19:21 IST)
ಬೆಂಗಳೂರು: ಸಿಲಿಕಾನ್ ಸಿಟಿಗೆ ನಿನ್ನೆ ವರ್ಷದ ಮೊದಲ ಮಳೆಯ ಸಿಂಚನವಾಗಿದ್ದು ಇಂದು ಕೂಡ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಮಳೆಯಾಗಿರುವ ವರದಿಗಳು ಹೊರಬಿದ್ದಿವೆ.
 
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಮತ್ತು ಅಸಾನಿ ಚಂಡಮಾರುತದ ಪರಿಣಾಮ ರಾಜ್ಯದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ರಾಜ್ಯಾದ್ಯಂತ ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರು ಹಾಗೂ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
 
ಸಂಜೆಯ ವೇಳೆಯಲ್ಲಿ ರಾಜಧಾನಿಯ ಮಲ್ಲೇಶ್ವರ, ಸದಾಶಿವನಗರ, ಚಾಮರಾಜಪೇಟ, ಚಿಕ್ಕಪೇಟೆಯಲ್ಲಿ  ಮಳೆಯ ಸಿಂಚನವಾಗಿದೆ. 
 
ನಗರದ ಹೊರವಲಯಲ್ಲೂ ಮಳೆ:
 
ಗಿರಿನಗರ, ಹನುಮಂತನಗರ, ಬನಶಂಕರಿ, ಬಸವನಗುಡಿ, ಜಯನಗರ, ಜೆಪಿ ನಗರ, ಕುರುಬರಹಳ್ಳಿ, ಪದ್ಮನಾಭನಗರ, ಗಾಂಧಿನಗರ, ಕಾಟನ್ ಪೇಟೆ ಹಾಗೂ ಕಬ್ಬನ್ ಪಾರ್ಕ್, ಕೆಆರ್ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ನಗರದ ಹೊರ ಭಾಗದಲ್ಲೂ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ