ಕೀವ್ : ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ತನ್ನ ಸೇನಾ ಬಲದಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ಕುರಿತು ವರದಿಯೊಂದು ಹೊರಬಿದ್ದಿದೆ.
ರಷ್ಯಾ, ಉಕ್ರೇನ್ ಯುದ್ಧ ಆರಂಭವಾಗಿ ಇಂದಿಗೆ 23 ದಿನಗಳಾಗಿದೆ. ಕೀವ್ ವಶಪಡಿಸಿಕೊಳ್ಳಲು ರಷ್ಯಾ ಹಪಹಪಿಸುತ್ತಿದೆ. ಇತ್ತ ರಷ್ಯಾದ ದಾಳಿಗೆ ತಡೆ ಒಡ್ಡುತ್ತಿರುವ ಉಕ್ರೇನ್ ಕೂಡ ಹೋರಾಡುತ್ತಿದೆ.
ಈ ನಡುವೆ ರಷ್ಯಾ ಸೇನೆಯ ಹಲವು ಯುದ್ಧೋಪಕರಣಗಳನ್ನು ಹೊಡೆದುರುಳಿಸಿರುವ ಬಗ್ಗೆ ಉಕ್ರೇನ್ ಸೇನೆ ಮಾಹಿತಿ ನೀಡಿರುವುದು ವರದಿಯಾಗಿದೆ.
ಉಕ್ರೇನ್ ಸೇನೆ ನೀಡಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ 14,200 ಸೈನಿಕರು, 93 ಯುದ್ಧ ವಿಮಾನ, 112 ಹೆಲಿಕಾಪ್ಟರ್, 450 ಟ್ಯಾಂಕ್, 205 ಮಿಲಿಟರಿ ಶಸ್ತ್ರಸಜ್ಜಿತ ವಾಹನ, 1,448 ಯುದ್ದೋಪಕರಣ ಸಾಗಾಟ ವಾಹನ, 72 ಎಮ್ಎಲ್ಆರ್ಎಸ್, 3 ಬೋಟ್, 879 ವಾಹನ, 60 ಇಂಧನ ಟ್ಯಾಂಕರ್, 12 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ತಿಳಿಸಿರುವ ಮಾಹಿತಿಯೊಂದನ್ನು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.