ನವದೆಹಲಿ : ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಗೋಧಿ ಹೆಚ್ಚಿನ ಮಟ್ಟದಲ್ಲಿ ರಫ್ತಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ವರ್ಷದ ಹಿಂದೆ ಭಾರತದಿಂದ 1.08 ಕೋಟಿ ಮೆಟ್ರಿಕ್ ಟನ್ನಷ್ಟು ಗೋಧಿ ರಫ್ತಾಗಿತ್ತು. ಉಕ್ರೇನ್ ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಈ ವರ್ಷ ಭಾರತದಿಂದ 1.10 ಕೋಟಿ ಮೆಟ್ರಿಕ್ ಟನ್ ಗೋಧಿ ರಫ್ತಾಗುವ ನಿರೀಕ್ಷೆ ಇದೆ ಎಂದು ಎಸ್ ಆ್ಯಡ್ ಪಿ ಗ್ಲೋಬಲ್ ಪ್ಲಾಟ್ಸ್ ಸಮೀಕ್ಷೆ ಬಹಿರಂಗಪಡಿಸಿದೆ.
ರಷ್ಯಾ ವಿಶ್ವದಲ್ಲೇ ಅತೀ ಹೆಚ್ಚು ಗೋಧಿಯನ್ನು ರಫ್ತು ಮಾಡುವ ದೇಶಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಕ್ರೇನ್ 5ನೇ ಸ್ಥಾನದಲ್ಲಿದ್ದರೆ ಭಾರತ ಸದ್ಯ 10ನೇ ಸ್ಥಾನದಲ್ಲಿದೆ.
ಜಾಗತಿಕವಾಗಿ ಉಕ್ರೇನ್ ಹಾಗೂ ರಷ್ಯಾ ಶೇ.25 ರಷ್ಟು ಪಾಲಿನ ಗೋಧಿಯನ್ನು ರಫ್ತು ಮಾಡುತ್ತಿತ್ತು. ಇದೀಗ ಭಾರತದಲ್ಲಿ ಗೋಧಿ ರಫ್ತು ಹೆಚ್ಚಾದಲ್ಲಿ ಉಕ್ರೇನ್ ಹಾಗೂ ರಷ್ಯಾದ ರಫ್ತಿನ ಸ್ಥಾನ ಕೆಳಗಿಳಿಯಲಿದ್ದು, ಭಾರತದ ಸ್ಥಾನ ಏರಲಿದೆ.