ಎಸ್‌.ಎಂ.ಕೃಷ್ಣ ವಿರುದ್ಧ ಸಿಎಂ ಪರೋಕ್ಷವಾಗಿ ವಾಗ್ದಾಳಿ

ಬುಧವಾರ, 11 ಅಕ್ಟೋಬರ್ 2017 (19:27 IST)
ಬೆಂಗಳೂರನ್ನು ಕೆಲವರು ಸಿಂಗಾಪೂರ್ ಮಾಡಲು ಹೊರಟಿದ್ದರು. ಆದ್ರೆ ಅದು ಆಗಲಿಲ್ಲ ಎಂದು ಮಾಜಿ ಸಿಎಂ ಎಸ್‌.ಎಂ.ಕೃಷ್ಣ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಕೆಲವರು ಹಿಂದೆ ಬೆಂಗಳೂರು ನಗರವನ್ನು ಸಿಂಗಾಪೂರ್ ನಗರವನ್ನಾಗಿಸುವ ಕನಸು ತೋರಿಸಿದ್ದರು. ಆದರೆ, ಬೆಂಗಳೂರು ಸಿಂಗಾಪೂರ್ ಆಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
ಪೌರ ಕಾರ್ಮಿಕರ ಸಿಂಗಾಪೂರ್ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರು ಸಿಂಗಾಪೂರ್‌ಗೆ ತೆರಳಿ ಪ್ರತ್ಯಕ್ಷ ಅನುಭವ ಪಡೆಯಲಿ ಎನ್ನುವ ಉದ್ದೇಶದಿಂದ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ನಮ್ಮ ಸರಕಾರ ನುಡಿದಂತೆ ನಡೆಯುವ ಸರಕಾರ. ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಜನತೆಯ, ರೈತರ ಹಿತ ನಮ್ಮ ಸರಕಾರದ ಮೊದಲ ಆದ್ಯತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ