ಸಿಎಂ ಬೊಮ್ಮಾಯಿಗೆ ಮತ್ತೆ ಶುರುವಾಯ್ತು ಟೆನ್ಷನ್

ಗುರುವಾರ, 3 ಫೆಬ್ರವರಿ 2022 (14:44 IST)
ರಾಜ್ಯ ಸಚಿವ ಸಂಪುಟ ಸೇರಲು ಬಿಜೆಪಿ ಶಾಸಕರಿಂದ ಭಾರೀ ಲಾಬಿ ಶುರುವಾಗಿದೆ. ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ಎರಡು ಡಜನ್‍ಗೂ ಅಧಿಕ ಶಾಸಕರು ಮಂತ್ರಿ ಸ್ಥಾನದ ಕುರ್ಚಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
 
'ಉಳಿದಿರುವ ಒಂದೂವರೆ ವರ್ಷಗಳ ಅವಧಿಯಲ್ಲಾದರೂ ಮಂತ್ರಿಯಾಗಲೇಬೇಕೆಂದು ಪಟ್ಟು ಹಿಡಿದಿರುವ ಶಾಸಕರು ತಮ್ಮ ತಮ್ಮ ಗಾಡ್ ಫಾದರ್ ಗಳ ಮೂಲಕ ಲಾಬಿ ನಡೆಸುತ್ತಿದ್ದಾರೆ.
ಶಾಸಕರ ಲಾಬಿ ಸಿಎಂ ಬೊಮ್ಮಾಯಿ ಹಾಗೂ ವರಿಷ್ಠರಿಗೂ ಕಗ್ಗಂಟಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ , ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮೂಲಕ ಒತ್ತಡ ತಂತ್ರದ ಮೊರೆ ಹೋಗಿದ್ದಾರೆ.
 
ಜಾರಕಿಹೊಳಿ ಸಹೋದರರು ಈ ಬಾರಿ ಸಂಪುಟಕ್ಕೆ ಸೇರಲು ಇನ್ನಿಲ್ಲದಂತೆ ಪ್ರಯತ್ನ ನಡೆಸಿದ್ದಾರೆ. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮೂಲಕ ಮಾಜಿ ಸಚಿವ ಲಾಭಿ ಮುಂದುವರೆಸಿದ್ದಾರೆ. ಇತ್ತ ಶಾಸಕರಾದ ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಪರಿಷತ್ ಸದಸ್ಯರಾದ ಸಿಪಿ ಯೋಗೀಶ್ವರ್, ಆರ್. ಶಂಕರ್, ರಾಮ್ ದಾಸ್, ಪೂರ್ಣಿಮಾ ಶ್ರೀನಿವಾಸ್, ಎಂಪಿ ರೇಣುಕಾಚಾರ್ಯ, ರಾಜು ಗೌಡ ಪ್ರೀತಮ್ ಗೌಡ ಸೇರಿದಂತೆ ಸಾಕಷ್ಟು ಜನ ಶಾಸಕರು ಲಾಭಿ ಮುಂದುವರಿಸಿದ್ದಾರೆ. ಇತ್ತ ಹೈಕಮಾಂಡ್ ಭೇಟಿಗೆ ಸಿಎಂ ಸೋಮವಾರ ಮುಂದಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ