ರಾಜೀವ್ ಗಾಂಧಿ ವೈದ್ಯಕೀಯ ಪರೀಕ್ಷೆ ಮುಂದೂಡಿಕೆ

ಮಂಗಳವಾರ, 1 ಫೆಬ್ರವರಿ 2022 (17:08 IST)
ಫೆಬ್ರವರಿಯಲ್ಲಿ ಆರಂಭಿಸಲು ನಿಗದಿ ಪಡಿಸಲಾಗಿದ್ದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂ ದೂಡಿಕೆ ಮಾಡಲಾಗಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಆಲ್ ಇಂಡಿ ಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇನ್ ನಿಂದ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ವೈದ್ಯಕೀಯ ಪರೀ ಕ್ಷೆಗಳ ಕುರಿತಂತೆ ಹೊರಡಿಸಿದ್ದಂತ ವೇಳಾಪಟ್ಟಿಯ ಅಂತಿಮ ವರ್ಷದ ಪರೀಕ್ಷೆಗಳನ್ನು ಫೆಬ್ರವರಿ 22ರಿಂದ ನಡೆಸಲು ನಿರ್ಧರಿಸಲಾಗಿತ್ತು.
ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳನ್ನು,
 
ವೈದ್ಯಕೀಯ ಉಪನ್ಯಾಸಕರನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಮೇ ತಿಂಗಳಿನಲ್ಲಿ, ಜುಲೈ ತಿಂಗಳಿನಲ್ಲಿ ಕೋವಿಡ್ ಕಾರಣದಿಂದ ಆನ್ ಲೈನ್ ಲ್ಲಿಯೇ ತರಗತಿಗಳು ನಡೆದಿದ್ದು, ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಹ ಆಗಿರೋದಿಲ್ಲ ಎಂಬುದಾಗಿ ಹೇಳಿದೆ. ಜೊತೆಗೆ ಪಠ್ಯಕ್ರಮಗಳ ಬೋಧನೆ ಸರಿಯಾಗಿ ಆಗಿರದ ಕಾರಣ, ಪರೀಕ್ಷೆಗಳನ್ನು ಮುಂದೂಡುವಂತೆಯೂ ಕೋರಿದ್ದಾರೆ. ಈ ಹಿನ್ನಲೆಯಲ್ಲಿ ಫೆಬ್ರವರಿ 22, 2022ರಿಂದ ಆರಂಭಿಸಲು ನಿರ್ಧರಿಸಿದ್ದಂತ ಪರೀಕ್ಷೆಗಳನ್ನು ಮುಂದೂಡಿಕೆ ಮಾಡುವಂತೆ ರಾಜೀವ್ ಗಾಂಧಿ ವಿವಿಯ ಉಪಕುಲಸಚಿವರಿಗೆ ಸೂಚಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ