ಗೃಹಲಕ್ಷ್ಮಿ ನೋಂದಣಿ ಗೆ ಚಾಲನಾ ಕಾರ್ಯಕ್ರಮ ಆರಂಭವಾಗಿದ್ದು,ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಸಚಿವರಾದ ರಾಮಲಿಂಗಾರೆಡ್ಡಿ, ಮುನಿಯಪ್ಪ, ಬೈರತಿ ಸುರೇಶ್, ರಹೀಂ ಖಾನ್ ಭಾಗಿಯಾಗಿದ್ದಾರೆ.ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ್ದು,ದೀಪ ಬೆಳಗುವ ಮೂಲಕ ಗೃಹಲಕ್ಷ್ಮಿ ನೋಂದಣಿಗೆ ಸಿಎಂ, ಡಿಸಿಎಂ ಚಾಲನೆ ನೀಡಿದ್ರು.
ಸಾಂಕೇತಿಕವಾಗಿ ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪ್ರತಿ ವಿತರಣೆ ಮಾಡಿದ್ರು.ಆನಂದಿ ಲಿಂಗಯ್ಯ, ಸುಮಾ ಪ್ರಭಾಕರ್, ಸತ್ಯಾ ಎಂಬ ಮೂವರು ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಿದ್ರು.ಗೃಹಲಕ್ಷ್ಮಿ ಯೋಜನೆ ಲಾಂಛನ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ರು.