ನಾಳೆ ದೆಹಲಿಯತ್ತ ಸಿಎಂ, ಡಿಸಿಎಂ: ರಾಜ್ಯದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಸಾಧ್ಯತೆ

Sampriya

ಸೋಮವಾರ, 29 ಜುಲೈ 2024 (10:59 IST)
Photo Courtesy X
ಬೆಂಗಳೂರು: ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರವನ್ನು ಪ್ರಶ್ನಿಸಿ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ನಡೆಸಿ, ಇದರ ಹೊಣೆಗಾರಿಯನ್ನು ಸಿದ್ದರಾಮಯ್ಯ ಅವರು ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದೆ.

ರಾಜ್ಯದಲ್ಲಿ ಮುಡಾ, ವಾಲ್ಮೀಕಿ ಹಗರಣದ ಬಿಸಿ ಏರುತ್ತಿರುವಾಗಲೇ ಇದೀಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯತ್ತ ಹೊರಟಿದ್ದಾರೆ. ಇನ್ನು ನಾಳೆ ನಡೆಯುವ ಹೈಕಮಾಂಡ್ ಸಭೆಯಲ್ಲಿ ರಾಜ್ಯದ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ತರುವ ನಿರೀಕ್ಷೆಯಿದೆ.

ಕಳೆದ ಒಂದೂವರೆ ವರ್ಷದಲ್ಲಿ ಸಚಿವರ ಕಾರ್ಯವೈಖರಿ ನೋಡಿ ಅವರ ಖಾತೆಯಲ್ಲಿ ಬದಲಾವಣೆ ತರುವ ಪ್ಲಾನ್ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯಿದೆ. ಇನ್ನೂ 6 ರಿಂದ 7 ಸಚಿವರ ಖಾತೆಗಳು ಬದಲಾವಣೆ ಆದರು ಅಚ್ಚರಿಯೇನಿಲ್ಲ.  ಇನ್ನೂ ಸಚಿವ ಸಂಪುಟ ಪುನರ್ ರಚನೆ ಮಾಡದೆ ಖಾತೆಯನ್ನು ಅದಲು ಬದಲು ಮಾಡಲಿದ್ದಾರೆ ಎಂಬ ಮಾಹಿತಿಯಿದೆ.  

ಈ ಸಂಬಂಧ ನಾಳೆ ಸಿಎಂ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಹೈಕಮಾಂಡ್ ನಾಯಕರ ಜತೆ ಸುದೀರ್ಘವಾಗಿ ಮಾತನಾಡಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡದವರ ಸಚಿವರ ಖಾತೆಯನ್ನು ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಇನ್ನೂ ಈ ಸಭೆಯಲ್ಲಿ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮುಡಾ ಹಾಗೂ ವಾಲ್ಮೀಕಿ ಹಗರಣದ ಕಪ್ಪು ಚುಕ್ಕೆಯಿಂದ ಹೊರ ಬರಲು ಏನು ಮಾಡಬೇಕೆಂಬ ವಿಷಯದ ಕುರಿತು ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ರಾಜ್ಯದ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿಯಾಗಲಿದೆ ಎಂಬ ಮಾಹಿತಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ