ಎಲ್ಲ ಸಚಿವರಿಗೂ ಬರ ವೀಕ್ಷಣೆ ಮಾಡುವಂತೆ ಸಿಎಂ ಸೂಚನೆ

ಮಂಗಳವಾರ, 7 ನವೆಂಬರ್ 2023 (21:04 IST)
ಬಿಜೆಪಿ ,ಜೆಡಿಎಸ್ ಬರಗಾಲ‌ ವೀಕ್ಷಣೆಗೆ ತಂಡ ರಚನೆ ಮಾಡಲಾಗಿದೆ. ತಂಡಗಳ ಬರ ವೀಕ್ಷಣೆ ಕಾರ್ಯ ಆರಂಭವಾಗಿದ್ದು,ವಿಪಕ್ಷಗಳು ತಂಡ ರಚನೆ ಬೆನ್ನೆಲೆ ಸಿಎಂ ಸಿದ್ದರಾಮಯ್ಯ ಎಚ್ಚೆತ್ತಿಕೊಂಡಿದ್ದಾರೆ.ಎಲ್ಲಾ ಸಚಿವರಿಗೂ ಅವರ ಜಿಲ್ಲಾಗಳಲ್ಲಿ ಬರ ವಿಕ್ಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
 
ನವೆಂಬರ್‌ 15 ಒಳಗಾಗಿ ವರದಿ ಕೊಡುವಂತೆ ಸಿಎಂ ಸೂಚನೆ ಕೊಟ್ಟಿದ್ದು,ವಿಪಕ್ಷಗಳು ಜನರ ಮಧ್ಯೆ ಹೊರಟು ಬರ ವೀಕ್ಷಣೆ ಮಾಡಿರುವ ಹಿನ್ನಲೆ ಸರ್ಕಾರವು ಜನರ ಜೊತೆ ಇದೆ ಎಂದು ತೊರಿಸಲು ಸಿಎಂ ಸಿದ್ದರಾಮಯ್ಯ ಎಚ್ಚೇತ್ತುಕೊಂಡಿದ್ದಾರೆ.ಅನೇಕ ಜಿಲ್ಲೆಗಳಿಗೆ ಭೇಟಿ ಕೊಟ್ಟು ಬೆಳೆ ನಾಶ ವೀಕ್ಷಣೆ ಮಾಡುವಂತೆ ಸಿಎಂ ಚಾಟಿ ಬೆನ್ನಲೇ ಸಚಿವರು ಫೀಲ್ಡ್ ಗೆ ಇಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ