ರಾಹುಲ್ ‌ ಗಾಂಧಿಗೆ ತಿರುಗೇಟು ನೀಡಿದ ಆರೆಸ್ಸೆಸ್

ಮಂಗಳವಾರ, 7 ನವೆಂಬರ್ 2023 (13:14 IST)
ರಾಹುಲ್ ಆರೆಸ್ಸೆಸ್ ವಿರುದ್ಧ ಬಳಸಿದ ಪದಗಳು ಮತ್ತು ಆರೆಸ್ಸೆಸ್‌ನ್ನು ನಾಶಪಡಿಸುತ್ತೇನೆ ಎಂದು ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ಕಾಂಗ್ರೆಸ್ ಪಕ್ಷದ ಅಸಹಿಷ್ಣುತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ಆರೆಸ್ಸೆಸ್ ನಾಶಪಡಿಸಲು ಹಲವು ದಶಕಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಆರೆಸ್ಸೆಸ್ ಬೆಳೆಯುವುದನ್ನು ತಡೆಯುವುದು ಸಾಧ್ಯವಾಗಿಲ್ಲ ಎಂದು ಆರೆಸ್ಸೆಸ್ ಮುಖಂಡ ಮನಮೋಹನ್ ವೈದ್ಯ  ಲೇವಡಿ ಮಾಡಿದ್ದಾರೆ. 
 
 
ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷ ರಾಹುಲ್ ‌ ಗಾಂಧಿಗೆ ಆರೆಸ್ಸೆಸ್ ತಿರುಗೇಟು ನೀಡಿ, ರಾಹುಲ್ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದೆ. ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಬಿಜೆಪಿ ಮತ್ತು ಆರೆಸ್ಸೆಸ್ ನಾಶಪಡಿಸಲು ಸಮರ್ಥವಾಗಿದೆ ಎಂದು ಟೀಕಿಸಿದ್ದರು.
 
ಜಾತ್ಯಾತೀತವಾದ ಕಾಂಗ್ರೆಸ್ ಪಕ್ಷದ ರಕ್ತದಲ್ಲಿರುವುದರಿಂದ ಅದನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಜಾತ್ಯೀತತೆ ನಮ್ಮ ಪಕ್ಷದ ಡಿಎನ್‌ಎ ಆಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸುವುದಲ್ಲದೇ ಆರೆಸ್ಸೆಸ್ ಸಂಘಟನೆಯನ್ನು ಧ್ವಂಸಗೊಳಿಸಲಾಗುವುದು ಎಂದು ಗುಡುಗಿದ್ದರು.
 
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಎದುರಿಗೆ ಕೋಮುವಾದದಂತಹ ಬೃಹತ್ ಸವಾಲುಗಳಿವೆ. ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಕಾಂಗ್ರೆಸ್ ಸಿದ್ದವಿದೆ. ಕಾಂಗ್ರೆಸ್ ಪಕ್ಷ ಆರೆಸ್ಸೆಸ್ ವಿರುದ್ಧ ಹೋರಾಟ ಮಾಡುತ್ತಿಲ್ಲ ಎನ್ನುವುದು ತಪ್ಪು ಕಲ್ಪನೆಯಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ