ಸಿಎಂ ಜನಸ್ಪಂದನ ಅರ್ಜಿ ಸ್ವೀಕಾರಕ್ಕೆ ಕೈ ಕೊಟ್ಟ ಸರ್ವರ್

geetha

ಗುರುವಾರ, 8 ಫೆಬ್ರವರಿ 2024 (15:00 IST)
ಬೆಂಗಳೂರು-ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಜಿಲ್ಲೆ ಜಿಲ್ಲೆಗಳಿಂದಲೂ ನಡೆಯುತ್ತಿದೆ.ನಾಗರೀಕ ಸ್ಪಂದನೆಯ ಅಹವಾಲು ಹೊತ್ತುಬರುವ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಸಿಎಂ ಸೂಚನೆ ನೀಡಲಿದ್ದಾರೆ.ಅರ್ಜಿ ವಿಲೇವಾರಿ ಸಮಸ್ಯೆಗಳ ಬಗ್ಗೆ  ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆಯಲಿದ್ದಾರೆ.ಭಾರತದಲ್ಲೇ ಮೊದಲು ಬಾರಿಯು ಕಾರ್ಯಕ್ರಮ ನಡೆಯುತ್ತಿದೆ.ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಂಪರ್ಕ ಮಾಡಲಿದ್ದಾರೆ.ಏಕಕಾಲಕ್ಕೆ ಜಿಲ್ಲೆ ಹಾಗುಉ ವಿಧಾನಸೌದದಲ್ಲಿ ಅರ್ಜಿಗಳ ಪರಾಮರ್ಶೆ ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ.

ಸಿಎಂ ಜನಸ್ಪಂದನ ಅರ್ಜಿ ಸ್ವೀಕಾರಕ್ಕೆ ಸರ್ವರ್ ಕೈ ಕೊಟ್ಟಿದೆ.ಅರ್ಜಿ ಸ್ವೀಕಾರ ವಿಳಂಬ ಹಿನ್ನಲೆ ಆಕ್ರೋಶ ಗೊಂಡ ವ್ಯಕ್ತಿಯಿಂದ ಸಿಎಂ ವಿರುದ್ಧ ಘೋಷಣೆ  ಕೂಗಲಾಗಿದೆ.ಕೂಡಲೇ ಸ್ಥಳಕ್ಕೆ ದೌಡಾಯಿಸಿದ  ಪೊಲಿಸ್ ಆಯುಕ್ತ ದಯಾನಂದ್, ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್  ಸರ್ವರ್ ಸಮಸ್ಯೆ ಗಮನಕ್ಕೆ ತಂದು ವ್ಯಕ್ತಿ ಮನವೊಲಿಕೆ ಪ್ರಯತ್ನ  ಮಾಡಿದ್ದಾರೆ.ಅಧಿಕಾರಿಗಳು ಸರಿಯಾಗಿ ಸ್ಪಂದಿಸಿದ ಹಿನ್ನಲೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ