ಕರುಣಾನಿಧಿ ಪುತ್ರನಿಗೆ ಕರೆ ಮಾಡಿದ ಸಿಎಂ ಕುಮಾರಸ್ವಾಮಿ
ನಿನ್ನೆ ತಡರಾತ್ರಿ ರಕ್ತದೊತ್ತಡ ಏರುಪೇರಾದ ಹಿನ್ನಲೆಯಲ್ಲಿ ಜ್ವರ ಮತ್ತು ಮೂತ್ರ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿಯವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕರುಣಾನಿಧಿ ಆರೋಗ್ಯ ಸುಧಾರಿಸಲು ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಮುಖಂಡರು ಹಾರೈಸಿದ್ದಾರೆ. ಈ ನಡುವೆ ಸಿಎಂ ಕುಮಾರಸ್ವಾಮಿ ನಿನ್ನೆ ಎಂಕೆ ಸ್ಟಾಲಿನ್ ಗೆ ಕರೆ ಮಾಡಿ ಕರುಣಾನಿಧಿ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರಲ್ಲದೆ, ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.