ಸಿಎಂ ಎಚ್ ಡಿಕೆ ಸಿದ್ದರಾಮಯ್ಯಗೂ ಅವಮಾನ ಮಾಡಿದ್ದಾರೆ ಕೆಎಸ್ ಈಶ್ವರಪ್ಪ ಆರೋಪ
ಈ ಬಜೆಟ್ ನಿಂದ ಯಾರಿಗೂ ಸಮಾಧಾನವಾಗಿಲ್ಲ. ಸ್ವತಃ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡುವಂತೆ ಕೇಳಿದ್ದರು. ಆದರೆ ಅವರಿಗೂ ಅನುದಾನ ಕೊಡದೇ ಸಿಎಂ ಎಚ್ ಡಿಕೆ ಅವಮಾನ ಮಾಡಿದ್ದಾರೆ ಎಂದು ಈಶ್ವರಪ್ಪ ದೂರಿದ್ದಾರೆ.
ಅಷ್ಟೇ ಅಲ್ಲದೆ, ಎಚ್ ಕೆ ಪಾಟೀಲ್ ಬಜೆಟ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಪತ್ರ ಬರೆದಿರುವ ಬಗ್ಗೆ ಮಾತನಾಡಿರುವ ಅವರು ‘ಕಾಂಗ್ರೆಸ್ ಇತಿಹಾಸದಲ್ಲೇ ಇಂತಹದ್ದೊಂದು ಬೆಳವಣಿಗೆ ಇದೇ ಮೊದಲು. ಕಾಂಗ್ರೆಸ್ ನವರೇ ಬಜೆಟ್ ಬಗ್ಗೆ ಸಮಾಧಾನ ಹೊಂದಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ’ ಎಂದಿದ್ದಾರೆ.