ಜೆಡಿಎಸ್ ನಾಯಕರಿಗೆ ವಿಧಾನಸೌಧಕ್ಕೆ ಬರದಂತೆ ಸಿಎಂ ಎಚ್ ಡಿಕೆ ಎಚ್ಚರಿಕೆ!
ಜೆಡಿಎಸ್ ಪಕ್ಷದ ಸಭೆಯೊಂದರಲ್ಲಿ ಸಿಎಂ ಕುಮಾರಸ್ವಾಮಿ ಈ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಸೌಧದಲ್ಲಿ ವರ್ಗಾವಣೆ, ಇತರ ಕೆಲಸ ಮಾಡಿಸಲು ಬರುವ ನಾಯಕರಿಂದ ಪಕ್ಷಕ್ಕೆ, ಸಮ್ಮಿಶ್ರ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಜೆಡಿಎಸ್ ಶಾಸಕರಿಗಿಂತ ಹೆಚ್ಚು ಇತರ ನಾಯಕರೇ ಕಾಣಿಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಬೇರೆ ಕೆಲಸ ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಯಾರೂ ಬರಬೇಡಿ ಎಂದು ಸಿಎಂ ಕುಮಾರಸ್ವಾಮಿ ನಾಯಕರುಗಳಿಗೆ ಎಚ್ಚರಿಕೆ ನೀಡಿದ್ದಾರೆ.