ಏರ್ ಸ್ಟ್ರೈಕ್ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ; ಸಿಎಂ ವಿರುದ್ಧ ದೂರು ದಾಖಲು

ಭಾನುವಾರ, 3 ಮಾರ್ಚ್ 2019 (11:19 IST)
ಬೆಂಗಳೂರು : ಬಿಜೆಪಿಯವರು ತಾವೇ ಗಡಿ ದಾಟಿ ಉಗ್ರರ ಮೇಲೆ ದಾಳಿ ಮಾಡಿದವರಂತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವುದು ಅಶಾಂತಿಗೆ ಅವಕಾಶ ಮಾಡಿಕೊಟ್ಟ ಹಾಗೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿರುವುದಕ್ಕೆ ಅವರ  ವಿರುದ್ಧ ದೂರು ದಾಖಲಾಗಿದೆ.


ಹೊನ್ನಾಪುರ ಗ್ರಾಮದ ನಿವಾಸಿ ಅನಿಲ್ ಕುಮಾರ್ ಸಬರ್ ವಾಲ್ ಎಂಬವರು, ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆಯೇ ಈ ರೀತಿ ಹೇಳಿಕೆ ನೀಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಪ್ರೇರಣೆ ನೀಡುತ್ತಿದ್ದಾರೆ ಎಂದು ಅವರ ವಿರುದ್ಧ ಮಧುಗಿರಿ ತಾಲೂಕಿನ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಆದರೆ ಸಿಎಂ ಕುಮಾರಸ್ವಾಮಿ ಅವರು, ‘ಬಿಜೆಪಿಯವರು ಹೇಳಿಕೆಗಳನ್ನು ತಿರುಚಿ ದೇಶ ಒಡೆಯವುದರಲ್ಲಿ ನಿಸ್ಸೀಮರು. ನಮ್ಮ ಯೋಧರು ದೇಶ ರಕ್ಷಣೆಗೆ ಸಮರ್ಥರಿದ್ದು, ಅದನ್ನು ಅವರು ಮಾಡುತ್ತಾರೆ. ಆದರೆ ದೇಶದ ಒಳಗೆ ಬಿಜೆಪಿಯವರು ಅಶಾಂತಿಯ ವಾತಾವರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ನಿನ್ನೆ ಹೇಳಿದ್ದೆ, ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ