ಸಿಎಂ ಎರಡನೇ ದಿನದ ಮೈಸೂರು ಪ್ರವಾಸ
ಇಂದು ಸಿಎಂ ಸಿದ್ದರಾಮಯ್ಯ ಎರಡನೇ ದಿನದ ಮೈಸೂರು ಪ್ರವಾಸವನ್ನ ಕೈಗೊಂಡಿದ್ದಾರೆ. ಮದ್ಯಾಹ್ನ 2.30ಕ್ಕೆ ರಸ್ತೆ ಮೂಲಕ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ಕೊಟ್ಟು, ದಿ ಸ್ಟೇಟ್ ಆಫ್ ದಿ ಆರ್ಟ್ ಮ್ಯಾನುಫ್ಯಾಕ್ಟರಿಂಗ್ ಫೆಸಿಲಿಟಿ ಆಫ್ ಐಟಿಸಿ ಇಂಡಿವಿಶನ್ ಲಿಮಿಟೆಡ್ ನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಸಂಜೆ 4ಕ್ಕೆ ಎಸ್ವಿಇಐ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಮತ್ತು ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ. ಸಂಜೆ 7ಕ್ಕೆ ರಸ್ತೆ ಮೂಲಕ ಮದ್ದೂರು ತಾಲ್ಲೂಕಿನ ಶಿವಪುರ ಗ್ರಾಮಕ್ಕೆ ತೆರಳಲಿರುವ ಸಿಎಂ. ನಂತರ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ