ಅಳೆದು ತೂಗಿ ಲೋಕಸಭೆಗೆ ಟಿಕೆಟ್ ಕೊಡ್ತಾರಾ ಬಿಜೆಪಿ ವರಿಷ್ಠರು.?

ಮಂಗಳವಾರ, 14 ನವೆಂಬರ್ 2023 (20:30 IST)
ಅಸೆಂಬ್ಲಿ ಎಲೆಕ್ಷನ್‌ನ ಸೋಲಿನ ಬಳಿಕ ಬಿಜೆಪಿಯೂ, ಮತ್ತೊಂದು ದೊಡ್ಡ ಮಹಾಸಮರಕ್ಕೆ ಸಿದ್ಧತೆ ನಡೆಸುತ್ತಿದೆ. ಬರೀ ೬೬ ಸ್ಥಾನಗಳಷ್ಟೇ ಗೆಲ್ಲಲು ಸಫಲವಾಗಿದ್ದ ಬಿಜೆಪಿಗೆ, ದೊಡ್ಡ ಮಟ್ಟದ ಹಿನ್ನಡೆ ಆಗಿತ್ತು. ಆದರೆ ಇವಾಗ ೨೦೨೪ರ ಲೋಕಸಮರ ಅಖಾಡ ಸಿದ್ಧವಾಗ್ತಾ ಇದೆ. ಹಾಗಾಗಿ ಟಿಕೆಟ್ ಯಾರಿಗೆ ಕೊಟ್ಟರೆ, ಪಕ್ಷಕ್ಕೆ ಲಾಭವಾಗುತ್ತೆ ಅನ್ನೋದರ ಲೆಕ್ಕಾಚಾರ ಸದ್ದಿಲ್ಲದೇ ನಡೆಯುತ್ತಿದೆ. ಮುಖ್ಯವಾಗಿ ಪಕ್ಷದಲ್ಲಿನ ಹಿರಿಯ ಹಾಲಿ ಸಂಸದರಿಗೆ ಈ ಭಾರೀಯ ಚುನಾವಣೆಯಲ್ಲಿ ಟಿಕೆಟ್ ಮಿಸ್ ಆಗಬಹುದೆಂಬ ಟಾಕ್ ಜೋರಾಗಿದೆ.
 
ಅಸೆಂಬ್ಲಿ ಸೋತ ಬಿಜೆಪಿಗೆ ಇದೀಗ ಲೋಕಸಭಾ ಚುನಾವಣೆಯನ್ನು ಗೆಲ್ಲೋದೇ ದೊಡ್ಡ ಅಗ್ನಿಪರೀಕ್ಷೆಯಾಗಿದೆ. ಅದಕ್ಕಾಗಿ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಅಳೆದುತೂಗಿ, ನಿರ್ಧಾರ ತೆಗೆದುಕೊಳ್ಳುವ ಹಠಕ್ಕೆ ಬಿಜೆಪಿ ಬಿದ್ದಿದೆ... ಅದರಲ್ಲೂ ೧೦ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಈ ಭಾರೀಯ ಲೋಕಾ ಟಿಕೆಟ್ ಸಿಗೋದು ಬಹುತೇಕ ಡೌಟ್ ಎನ್ನಲಾಗ್ತಿದೆ..?

ಯೆಸ್... ಡೆಲ್ಲಿಯ ಬಿಜೆಪಿಯ ನಾಯಕರಿಗೆ ಲೋಕಾ ಅಖಾಡದಲ್ಲಿ ಪಾರುಪತ್ಯ ಸಾಧಿಸಲೇಬೇಕೆಂಬ ಅಹಂ ಬಂದAತಿದೆ.. ಏನೇ ಆಗಲೀ, ಕಳೆದ ಬಾರಿಯ ಫಲಿತಾಂಶವೇ ಮತ್ತೆ ಮರುಕಳಿಸಬೇಕೆಂಬುದು ಮೋದಿ ಮತ್ತು ಅಮಿತ್‌ಶಾ ಅವರ ಅಸಲಿ ಅಜೆಂಡಾವಾಗಿದೆ.. ಅದಕ್ಕಾಗಿ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳಿಗೆ ಮಣೆ ಹಾಕಲು ಪಕ್ಕಾ ಪ್ಲಾನ್ ಮಾಡಿಕೊಂಡಿದೆ ಬಿಜೆಪಿ...
 
ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಪಕ್ಷಕ್ಕೆ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಿದೆ. ಇನ್ನೇನು ಕೆಲವು ದಿನಗಳಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಯೂ ನಡೆಯಲಿದೆ ಅನ್ನುವ ಟಾಕ್ ಕೇಳಿ ಬರ್ತಾ ಇದೆ. ಅಲ್ಲಿಗೆ ಬಿಜೆಪಿಯೂ ಮತ್ತೆ ತನ್ನ ಹಳೇಯ ಲಯಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸಿದಂತಿದೆ.
 
ಎAಪಿ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ ಯಾರಿಗೆಲ್ಲಾ ಟಿಕೆಟ್ ಸಿಗಬಹುದು, ಹಾಗೇ ಯಾವೆಲ್ಲಾ ಹಾಲಿ ಸಂಸದರಿಗೆ ಈ ಭಾರೀಯ ಎಲೆಕ್ಷನ್‌ನಲ್ಲಿ ಟಿಕೆಟ್ ಮಿಸ್ ಆಗಬಹುದು, ಮೋದಿ ಮತ್ತು ಅಮಿತ್ ಶಾ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೇಗೆ ನಿರ್ಧಾರ ತೆಗೆದುಕೊಳ್ಳಬಹುದು ಅನ್ನೋದೆ ಸದ್ಯದ ಕುತೂಹಲ..?
 
ಲೋಕಸಭಾ ಎಲೆಕ್ಷನ್ ಫೈಟ್‌ನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಭಾರೀ ಲಾಭಿಗಳು ನಡೆಯುತ್ತಿವೆ. ಹಾಗೇ ನೋಡಿದರೇ ಇಂತಹದೊAದು ಟಿಕೆಟ್ ಪ್ರಹಸನವಾಗ್ತಾ ಇರೋದು ಇದೇ ಮೊದಲಲ್ಲ, ಈ ಹಿಂದೆಯೂ ಕೂಡ ಒಂದಷ್ಟು ಮಂದಿ ಲೋಕ ಟಿಕೆಟ್ ಗಿಟ್ಟಿಸಿಕೊಳ್ಳಲು ತಾಲೀಮು ನಡೆಸಿದ್ದರು. ಅದರಲ್ಲಿ ಮುಖ್ಯವಾಗಿ ಈ ಬಾರಿಯ ಅಸೆಂಬ್ಲಿ ಸೋತ ಹಲವು ಮಂದಿ ನಮಗೆ ಲೋಕಸಭಾ ಟಿಕೆಟ್ ನೀಡಿ ಅಂತ ಡೆಲ್ಲಿಯ ಹೈಕಮಾಂಡ್ ನಾಯಕರ ಕಡೆಗೆ ಚಿತ್ತ ನೆಟ್ಟಿದ್ದರು ಅನ್ನುವ ಮಾತಿದೆ.
 
ಸದ್ಯ ಬಿಜೆಪಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್‌ನೊಂದಿಗೆ ಲೋಕಸಭಾ ಎಲೆಕ್ಷನ್‌ಗೆ ಮೈತ್ರಿಯನ್ನು ಮಾಡಿಕೊಂಡಿರೋದ್ರಿAದ, ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಒಂದಷ್ಟು ಗೊಂದಲಗಳು ಸೃಷ್ಟಿ ಆಗಿವೆ. ಬಿಜೆಪಿಗೆ ೨೮ ಕ್ಷೇತ್ರಗಳಲ್ಲಿ ಎಷ್ಟು ಕ್ಷೇತ್ರಗಳು ಹಾಗೆ ಆ ಕಡೆ ದಳಪತಿಗಳಿಗೆ ಯಾವೆಲ್ಲಾ ಕ್ಷೇತ್ರಗಳು ಹಂಚಿಕೆ ಆಗಬಹುದೆಂಬ ಗೊಂದಲ ಇದ್ದೇ ಇದೆ. ಹಾಗಾಗಿ ಯಾರಿಗೆ ಎಷ್ಟು ಕ್ಷೇತ್ರಗಳು ಅನ್ನೋದರ ಮೇಲೆ, ಬಿಜೆಪಿಯಲ್ಲಿ ಯಾರಿಗೆ ಎಲ್ಲಿಂದ, ಟಿಕೆಟ್ ನೀಡಬಹುದು ಅನ್ನೋದರ ಸ್ಪಷ್ಟತೆ ಸಿಗಬಹುದು..?
 
ಲೋಕವೇ ಹೇಳಿದ ಮಾತಿದು.... ಅರ್ಥಾತ್ ಬಿಜೆಪಿಯ ನಾಯಕರೇ ಇಂತಹದೊAದು ಬಿಗ್‌ಸ್ಟಾಟರ್ಜಿಯನ್ನ ಮಾಡಲು ಹೊರಟ್ಟಿದ್ದಾರೆ. ಬಟ್ ಇದು ವಿಧಾನಸಭಾ ಚುನಾವಣೆ ಅಲ್ಲ ಅನ್ನೋ ಅರಿವು ಕೇಂದ್ರದ ಬಿಜೆಪಿಯ ವರಿ಼ಷ್ಠರಿಗೆ ಇದ್ದರೇ ಒಳ್ಳೆಯದು.. ಯಾಕಂದ್ರೆ ಅಸೆಂಬ್ಲಿ ಅಲ್ಲಿ ಆದ ಟಿಕೆಟ್ ಹಂಚಿಕೆಯ ಅನಾಹುತ ಏನೆಂಬುದು ಲೋಕಸಮರ ಸಮೀಪವಾಗ್ತಿರುವ ಈ ಹೊತ್ತಲ್ಲೇ ನೆನಪಲ್ಲಿ ಇರಬೇಕು.. ಬಟ್ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಹೊಸ ಪ್ರಯೋಗ, ಡೆಲ್ಲಿ ಅಖಾಡದಲ್ಲಿ ವರ್ಕೌಟ್ ಆಗಬಹುದು. ಆದ್ರೂ ಮತ್ತೆ ಪರಾಮರ್ಶಿಸಿ ಯೋಚಿಸಿ, ಯಾವುದೇ ಅಸಂತೋಷಕ್ಕೆ ಅವಕಾಶ ಮಾಡಿಕೊಡದಂತೆ ಆದರೆ, ಒಂದಷ್ಟು ಧನತ್ಮಕ ಫಲಿತಾಂಶವನ್ನ ನೀರೀಕ್ಷಿಸಬಹುದು... ಆದರೂ ಈಗ ಬಿಜೆಪಿಗೆ ವಿಜಯೇಂದ್ರ ಬಾಹುಬಲಿಯ  ಸಾರಥ್ಯ ಸಿಕ್ಕಿದೆ.. ಜೊತೆಗೆ ರಾಜಾಹುಲಿಯ ಖದರ್ ಮತ್ತೆ ಸದ್ದು ಮಾಡಬಹುದು, ಹೀಗಾದರೆ ಮರಿ ಹುಲಿ ಘರ್ಜಿಸದೇ ಇರುತ್ತಾ..?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ