ಕರ್ನಾಟಕ ನಂಬರ್ 1 ಮಾಡುವೆ ಎಂದ ಸಿಎಂ

ಗುರುವಾರ, 20 ಜೂನ್ 2019 (15:35 IST)
ರೈತರ ಸಾಲಮನ್ನಾ ಬಗ್ಗೆ ಘೋಷಣೆ ಮಾಡಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್ ಗಳು 34೦೦೦ ಕೋಟಿ ರೂ. ಸಾಲದ ಮಾಹಿತಿ ನೀಡಿದ್ದರು. ನಾಲ್ಕು ಹಂತಗಳಲ್ಲಿ ನಾಲ್ಕು ವರ್ಷದಲ್ಲಿ ಹಣದ ಹಂಚಿಕೆ ಬಗ್ಗೆ ಮಾಹಿತಿ ನೀಡಿದ್ದೇನೆ. ಹೀಗಂತ ಸಿಎಂ ಹೇಳಿದ್ದಾರೆ.

ರೈತರಿಂದ ಮಾಹಿತಿ ಪಡೆದು ದಾಖಲೆ‌ ಪಡೆದು ಮನ್ನಾ ಸೌಲಭ್ಯ ಪಡೆಯಲಾಗಿದೆ. 2018-19 ರಲ್ಲಿ 12೦೦೦ ಕೋಟಿ ರೂ, 2019-20 ರಲ್ಲಿ 13೦೦೦ ಕೋಟಿ ರೂ. ಸೇರಿ ಒಟ್ಟು 25೦೦೦ ಕೋಟಿ ರೂ. ಅನುದಾನ ನೀಡಿದ್ದೇವೆ. ಹೀಗಂತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಹಿಂದೆದೂ ಇಷ್ಟು ವೈಜ್ಞಾನಿಕವಾಗಿ ಸಾಲಮನ್ನಾ ಮಾಡಲಾಗಿದೆ. ರೈತರ ಬೇರೆ ಬೇರೆ ಹೆಸರಿನಲ್ಲಿ ಸಾಲ ಪಡೆಯಲಾಗಿದೆ. ಅದರ ಹಿನ್ನಲೆಯಲ್ಲಿ ಹೊರೆ ಕಡಿಮೆಯಾಗಿದೆ ಎಂದರು.

ರೈತರಿಗೆ ಕೊಟ್ಟಂತಹ ಮಾತನ್ನು ಪ್ರಾಮಾಣಿಕವಾಗಿ ಈಡೇರಿಸಲು ಸ್ಪಂದಿಸಿದ್ದೇವೆ. ಗ್ರಾಮ ವಾಸ್ತವ್ಯ ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರದಿಂದ ಗೊಂದಲವಾಗಿಲ್ಲ. 307 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. 302 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 140 ಕೋಟಿ ಅಪೆಕ್ಸ್ ಬ್ಯಾಂಕ್ ನಿಂದ ಡಿಸಿಸಿ ಬ್ಯಾಂಕ್ ಗೆ ಜಮಾ ಮಾಡಿಕೊಂಡಿದ್ದಾರೆ ಎಂದರು.

ಗ್ರಾಮ ವಾಸ್ತವ್ಯದಿಂದಾಗಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಸ್ಥಳದಲ್ಲಿಯೇ ಉಳಿದ ಸಮಸ್ಯೆ ಬಗೆಹರಿಸಲು ಸಹಕಾರವಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಡಿನ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತಿರಸ್ಕರಿಸಿದ್ದಾರೆ.‌ ಜನರು ಬಿಜೆಪಿಗೆ ಮತನೀಡಿ ಮೋಸ ಹೋದೆವು ಎಂದು ಬೇಸರಗೊಳ್ಳುವಂತೆ ಕೆಲಸ ಮಾಡುತ್ತೇವೆ.

ಸರ್ಕಾರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ನೀಡುತ್ತಿದ್ದೇವೆ. ದೇಶದ ಪರಿಸ್ಥಿತಿಯಲ್ಲಿ ನಂಬರ್ 1 ಆಗುವಂತೆ ಮಾಡುತ್ತೇನೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ