ತೈವಾನ್ ಮೂಲದ ನಿಯೋಗ ಸಿಎಂ ಭೇಟಿ ಮಾಡಿದ್ಯಾಕೆ?

ಗುರುವಾರ, 20 ಜೂನ್ 2019 (14:29 IST)
ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಷನ್ ಕಂಪನಿಯ  ನಿರ್ದೇಶಕ ವಿ.ಲೀ ಅವರ ನೇತೃತ್ವದ ನಿಯೋಗವು ಮುಖ್ಯ ಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದೆ.  

ಕೋಲಾರದ ನರಸಾಪುರದಲ್ಲಿ ಆರಂಭಿಸಲು ಉದ್ದೇಶಿಸಿರುವ 650 ಕೋಟಿ ರೂ.ಬಂಡವಾಳದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳ ಕಂಪನಿಗೆ ಈಗಾಗಲೇ 40 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿದ್ದು, ಬಾಕಿ 3 ಎಕರೆ ಜಮೀನು ಮಂಜೂರು ಮಾಡುವಂತೆ  ಲೀ ಅವರು ಮನವಿ ಮಾಡಿದರು. 

ಈಗಾಗಲೇ ವಿಸ್ಟ್ರಾನ್  ಕಂಪನಿಯ ಒಂದು ಘಟಕ  ಪೀಣ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 1500 ಜನರಿಗೆ ಉದ್ಯೋಗ ನೀಡಿದೆ ಎಂದು ಲೀ ತಿಳಿಸಿದರು. ರಾಜ್ಯ ದಲ್ಲಿ ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಜನೆ ದೃಷ್ಟಿಯಿಂದ ಸರ್ಕಾರದ ವತಿಯಿಂದ ಕಂಪನಿಗೆ ಎಲ್ಲ ಸಹಕಾರ ನೀಡುವ ಭರವಸೆಯನ್ನು  ಮುಖ್ಯಮಂತ್ರಿ ಈ ಸಂದರ್ಭದಲ್ಲಿ ನೀಡಿದರು. 

ಕಂಪನಿಯ ಸ್ಥಳೀಯ ನಿರ್ದೇಶಕ ಸೆಂಥಿಲ್ ಕುಮಾರ್  ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ. ವಿ.ರಮಣರೆಡ್ಡಿ, ವಿಸ್ಟ್ರಾನ್  ಸಂಸ್ಥೆಯ ಹಿರಿಯ  ವ್ಯವಸ್ಥಾಪಕ ಮಂಜುನಾಥ್.ಬಿ. ಉಪಸ್ಥಿತರಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ