ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೇ ಕನ್ನಡಿಗರಿಗೆ ಮೀಸಲಾತಿ ಟ್ವೀಟ್ ನ್ನೇ ಡಿಲೀಟ್ ಮಾಡಿಬಿಟ್ಟ ಸಿದ್ದರಾಮಯ್ಯ

Krishnaveni K

ಬುಧವಾರ, 17 ಜುಲೈ 2024 (15:03 IST)
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ದರ್ಜೆಯ ನೌಕರಿಯಲ್ಲಿ ಶೇ.100 ರಷ್ಟು ಮೀಸಲಾತಿ ಬಗ್ಗೆ ಈ ಮೊದಲು ಮಾಡಿದ್ದ ಟ್ವೀಟ್ ನ್ನು ಸಿಎಂ ಸಿದ್ದರಾಮಯ್ಯ ಇದೀಗ ಡಿಲೀಟ್ ಮಾಡಿದ್ದಾರೆ.
 

ಸಿಎಂ ಇಂತಹದ್ದೊಂದು ವಿಧೇಯಕ ಪಾಸ್ ಆದ ಬಗ್ಗೆ ಟ್ವೀಟ್ ಮಾಡಿದ ಬೆನ್ನಲ್ಲೇ ಉದ್ಯಮಿ ಕಿರಣ್ ಮಜುಂದಾರ್ ಶಾ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಕೆಲವೊಂದು ಕೌಶಲ್ಯದ ಕೆಲಸಕ್ಕೆ ಈ ನಿಯಮ ಅನ್ವಯವಾದರೆ ತೊಂದರೆಯಾಗುತ್ತದೆ ಎಂದಿದ್ದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಪರ-ವಿರೋಧ ಚರ್ಚೆಗಳು ಶುರುವಾಗಿದ್ದವು.

ಇದರ ಬೆನ್ನಲ್ಲೇ ಸಿಎಂ ಈ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ. ವಿಧೇಯಕದಲ್ಲಿ ಮ್ಯಾನೇಜ್ ಮೆಂಟ್ ಹುದ್ದೆಗಳಲ್ಲಿ ಶೇ.50 ರಷ್ಟು ಮತ್ತು ಮ್ಯಾನೇಜ್ ಮೆಂಟ್ ಅಲ್ಲದ ಹುದ್ದೆಗಳಿಗೆ ಶೇ.50 ರಷ್ಟು ಕನ್ನಡಿಗರಿಗೆ ಮೀಸಲಾತಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಸಿ ಮತ್ತು ಡಿ ದರ್ಜೆ ನೌಕರಿಯಲ್ಲಿ ಶೇ.100 ರಷ್ಟು ಕನ್ನಡಿಗರಿಗೆ ಮೀಸಲಾತಿ ಎನ್ನುವ ಬಗ್ಗೆ ಗೊಂದಲಗಳಿವೆ ಎನ್ನಲಾಗಿದೆ.

ಇದೇ ಕಾರಣಕ್ಕೆ ಸಿಎಂ ಟ್ವೀಟ್ ಡಿಲೀಟ್ ಮಾಡಿರಬಹುದು ಎನ್ನಲಾಗುತ್ತದೆ. ಆದರೆ ಟ್ವೀಟ್ ಡಿಲೀಟ್ ಮಾಡಿರುವುದಕ್ಕೆ ಸಿಎಂ ಸ್ಪಷ್ಟ ಕಾರಣವನ್ನೇನೂ ಕೊಟ್ಟಿಲ್ಲ. ಕನ್ನಡ ಪರ, ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ