ಹಾವೇರಿ ದುರಂತದಲ್ಲಿ ಮಡಿದವರಿಗೆ ಕೊನೆಗೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

Krishnaveni K

ಶುಕ್ರವಾರ, 28 ಜೂನ್ 2024 (17:07 IST)
ಹಾವೇರಿ: ಇಲ್ಲಿನ ಸಮೀಪದ ಗುಂಡನಹಳ್ಳಿ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಕೊನೆಗೂ ಪರಿಹಾರ ಧನ ಘೋಷಿಸಿದ್ದಾರೆ.

ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಢಿಕ್ಕಿ ಹೊಡೆದು 13 ಜನ ಸಾವನ್ನಪ್ಪಿದ್ದರು. ಈ ಪೈಕಿ ನಾಲ್ವರು ಪುರುಷರು, ಏಳು ಜನ ಮಹಿಳೆಯರು ಮತ್ತು ಒಂದು ಮಗು, ಅಜ್ಜಿ ಹಾಗೂ ವಿಕಲಾಂಗ ಯುವತಿಯೂ ಸೇರಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿಯ ಎಮ್ಮೆ ಹಟ್ಟಿಯವರು.

ದುರಂತಕ್ಕೀಡಾದವರ ಕುಟುಂಬಸ್ಥರು ಸಿಎಂ ಪರಿಹಾರ ಘೋಷಣೆ ಮಾಡದೇ ಅಂತ್ಯ ಕ್ರಿಯೆ ಮಾಡಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಎಲ್ಲರೂ ಬಡವರಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರು. ದೇವರ ದರ್ಶನ ಮಾಡಿಕೊಂಡು ಬರುವಾಗ ದುರಂತ ಸಂಭವಿಸಿತ್ತು.

ಇದೀಗ ಕುಟುಂಬಸ್ಥರ ಒತ್ತಡಕ್ಕೆ ಮಣಿದು ಕೊನೆಗೂ ಸಿಎಂ ಸಿದ್ದರಾಮಯ್ಯ ತಲಾ 2 ಲಕ್ಷ ರೂ.ಗಳಂತೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಮಾಧ್ಯಮ ಪ್ರಕಟಣೆ ನೀಡಿದ್ದು, ಮೃತಪಟ್ಟವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ