`ಇತಿಹಾಸವಿಲ್ಲದೆ ರಾಷ್ಟ್ರಪತಿ ಕೋವಿಂದ್ ಟಿಪ್ಪು ಬಗ್ಗೆ ಮಾತನಾಡಿದ್ದಾರಾ..!?’

ಶುಕ್ರವಾರ, 3 ನವೆಂಬರ್ 2017 (13:52 IST)
ಬೆಂಗಳೂರು: ಟಿಪ್ಪು ಜಯಂತಿ ವೋಟ್ ಬ್ಯಾಂಕ್ ರಾಜಕಾರಣ ಎಂಬ ಅಮಿತ್ ಷಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇತಿಹಾಸ ಗೊತ್ತಿಲ್ಲದವರು ಆ ರೀತಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಮಾತನಾಡಿದ ಅವರು, ವಜ್ರಮಹೋತ್ಸವದ ವೇಳೆ ವಿಶೇಷ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಟಿಪ್ಪು ಒಬ್ಬ ದೇಶ ಭಕ್ತ. ಬ್ರಿಟಿಷ್ ವಿರುದ್ಧ ಹೋರಾಟ ಮಾಡಿದವನು ಎಂದು ಹೇಳಿದ್ದಾರೆ. ಅಂತ ರಾಷ್ಟ್ರಪತಿಗಳೇ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಇತಿಹಾಸ ಇರೋದಕ್ಕೆ ಅವರು ಮಾತನಾಡಿರೋದು. ಗೊತ್ತಿಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಯಡಿಯೂರಪ್ಪಗೆ ಈಗಾಗಲೇ ರಾಜ್ಯದ ಜನರೇ ಬುದ್ಧಿ ಕಲಿಸಿದ್ದಾರೆ. ಅವರು ಯಾತ್ರೆ ಮಾಡೋದ್ರಿಂದ ನಮಗೆ ಲಾಭ. ಅವರೇನೆ ಹೇಳಿದರು ಜನ ಕೇಳಲ್ಲ. ಕೇಂದ್ರದ ಅನುದಾನ ದುರುಪಯೋಗ ಆರೋಪ ಮಾಡಿರುವ ಬಗ್ಗೆ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇದ್ದಾರೆ. ಅವರು ಸದನದಲ್ಲಿ ಕೇಳಲಿ ಅಲ್ಲಿಯೇ ಉತ್ತರಿಸುತ್ತೇನೆ. ಅಮಿತ್ ಷಾ ಸುಳ್ಳು ಹೇಳಿ ಹೋಗಿದ್ದಾರೆ. ಕೇಂದ್ರ ಸರ್ಕಾರದ ಅನುದಾನ ನಮ್ಮ ಹಕ್ಕು, ನಮ್ಮ ಪಾಲು ಎಂದರು.

ಖಾಸಗಿ ವೈದ್ಯರ ಮುಷ್ಕರ ವಿಚಾರದ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಯಾವುದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಗೊತ್ತಿಲ್ಲ. ಆದರೆ ಮುಷ್ಕರ ಮಾಡಬಾರದು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ಕೊಟ್ಟಿದ್ದೇವೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ಇನ್ನೂ ಮಂಡನೆಯಾಗಿ, ಚರ್ಚೆಯಾಗಬೇಕು. ಆದ್ರೆ ಚರ್ಚೆಗೂ ಮುನ್ನವೇ ಮುಷ್ಕರ ಮಾಡಿದರೆ ಹೇಗೆ. ಹೀಗಿದ್ರೂ ವೈದ್ಯರು ಮೊದಲೇ ಪ್ರತಿಭಟನೆ ಮಾಡೋದು ಸರಿಯಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ