ಜಾರ್ಜ್ ಕೊಲೆಗಡುಕ ಅಂದ್ರೂ ಸುಮ್ಮನಿರಬೇಕಾ?: ಸಿಎಂ ಗುಡುಗು

ಸೋಮವಾರ, 13 ನವೆಂಬರ್ 2017 (16:57 IST)
ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್‌ರನ್ನು ಬಿಜೆಪಿ ನಾಯಕರು ಕೊಲೆಗಡುಕ ಎಂದರೂ ಸುಮ್ಮನಿರಬೇಕಾ ಎಂದು ಸಿಎಂ ಸಿದ್ದರಾಮಯ್ಯ ಏರು ಧ್ವನಿಯಲ್ಲಿ ಗುಡುಗಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಜಾರ್ಜ್‌ರನ್ನು ಕೊಲೆಗಡುಕ ಎಂದು ಹೇಳಿದೆಯಾ? ಹೇಳಿಲ್ಲ ಅಂದ ಮೇಲೆ ಬಿಜೆಪಿ ನಾಯಕರು ಯಾಕೆ ಅಂತಹ ಪದವನ್ನು ಬಳಕೆ ಮಾಡುವುದು ಎಂದು ಕಿಡಿಕಾರಿದ್ದಾರೆ.
 
ನಿಲುವಳಿ ಸೂಚನೆಗೆ ಇದು ಯೋಗ್ಯ ವಿಷಯವಲ್ಲ. ನಿಯಮಗಳ ಪ್ರಕಾರವು ಇದು ಚರ್ಚೆಗೆ ತಕ್ಕ ವಿಷಯವಲ್ಲ. ಅಧಿಕಾರದಲ್ಲಿರುವ ಅನೇಕ ರಾಜಕಾರಣಿಗಳ ಮೇಲೆ ಎಫ್‌ಐಆರ್ ಆಗಿವೆ. ಆದರೆ ಯಾರೂ ರಾಜೀನಾಮೆ ನೀಡಿಲ್ಲ. ಹಾಗಾಗಿ ಜಾರ್ಜ್ ಕೂಡಾ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
 
ಹಿಂದೆ ಸಿಐಡಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಬಹುದು ಎನ್ನುವ ಬಿಜೆಪಿ ನಾಯಕರ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಜಾರ್ಜ್ ರಾಜೀನಾಮೆ ನೀಡಿದ್ದನ್ನು ಮರೆಯಬೇಡಿ ಎಂದು ತಿಳಿಸಿದರು.  .
 
ಸದನ ಸುಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಧರಣಿಯನ್ನು ಹಿಂಪಡೆಯಿರಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ ಘಟನೆ ನಡೆಯಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ