ತಾಕತ್ತಿದ್ರೆ ಚೀಟಿ ಇಟ್ಟುಕೊಂಡು 15 ನಿಮಿಷ ಓದಿ: ಪ್ರಧಾನಿಗೆ ಸಿಎಂ ಸವಾಲ್

ಗುರುವಾರ, 3 ಮೇ 2018 (18:44 IST)
ರಾಹುಲ್ ಗಾಂಧಿ 15 ನಿಮಿಷ ಚೀಟಿ ಇಲ್ಲದೆ ಮಾತನಾಡಲಿ ಎಂಬ ಮೋದಿ ಹೇಳಿಕೆಗೆ ಸಿ ಎಂ ಟಾಂಗ್, ನೀವು ಚೀಟಿ ಇಟ್ಟುಕೊಂಡು ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ ಏನೆಲ್ಲ ಸಾಧನೆ ಮಾಡಿದೆ ಎನ್ನುವುದನ್ನು 15 ನಿಮಿಷಗಳ ಕಾಲ ಓದಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೋದಿದು ಬಾಯಿ ಬಡಾಯಿ ಸಾಧನೆ ಶೂನ್ಯ ಸ್ವಾಭಿಮಾನ ಇಲ್ಲದೆ ಇರುವ ಯಡಿಯೂರಪ್ಪ ಅವರು ಅಮಿತ್ ಷಾ ಮುಂದೆ ತಲೆ ಬಗ್ಗಿಸಿ ನಿಂತು ಕರ್ನಾಟಕದ ಮಾನ ಹರಾಜು ಹಾಕುವ ಕೆಲಸ ಮಾಡಿದ್ದಾರೆ..ಯಡಿಯೂರಪ್ಪ, ರೆಡ್ಡಿ ಬ್ರದರ್ಸ್, ರಾಮುಲು ಲೂಟಿ ಕೋರರು.
 
ಗ್ರಾಮ ಪಂಚಾಯತಿ ಗೆಲ್ಲದವರನ್ನ ಬಿಜೆಪಿಯವರು ನನ್ನ ವಿರುದ್ಧ  ತಂದು ಹಾಕಿದ್ದಾರೆ, ಯಾಕಂದ್ರೆ ಜೆಡಿಎಸ್ ಬೆಂಬಲ ನೀಡಲು ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯನೋ ಅಷ್ಟೆ ಸತ್ಯ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರೋದು. ಮತ್ತೆ ನಮ್ಮದೆ ಸರ್ಕಾರ ನಾನೇ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ