ವಿನಯ್ ಕುಮಾರ್ ಸೊರಕೆಯವರನ್ನು ಭಾರಿ ಅಂತರದಿಂದ ಗೆಲ್ಲಿಸಿ: ಡಿಕೆಶಿ

ಗುರುವಾರ, 3 ಮೇ 2018 (17:45 IST)
ಉಡುಪಿ: ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ ವಿನಯ್ ಕುಮಾರ್ ಸೊರಕೆಯವರನ್ನು ಈ ಬಾರಿ ಭಾರಿ ಅಂತರದಿಂದ  ಗೆಲ್ಲಿಸಿ ಮತ್ತೊಮ್ಮೆ ವಿಧಾನ ಸೌಧದ ಪಡಸಾಲೆಗೆ ಕಳುಹಿಸಿಬೇಕು ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
 ಕಾಪುವಿನ ರಾಜೀವ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ರು. ಹಿರಿಯ ರಾಜಕಾರಣಿ ಜನಾರ್ಧನ ಪೂಜಾರಿಯವರ ನಂತರದ ಸ್ಥಾನವನ್ನು ವಿನಯ್ ಕುಮಾರ್ ಸೊರಕೆ ಸಮರ್ಥವಾಗಿ ತುಂಬಿದ್ದಾರೆ.  ಅಲ್ಲದೇ ರಾಜ್ಯಕ್ಕೆ ವಿನಯ್ ಕುಮಾರ್ ಕುಮಾರ್ ಸೊರಕೆ ಬಹು ದೊಡ್ಡ ಆಸ್ತಿ ಆಗಿದ್ದು,  ಅಭಿವೃದ್ಧಿಯ ಹರಿಕಾರರಾದ ವಿನಯ್ ಕುಮಾರ್ ಸೊರಕೆಯವರನ್ನು ಉಳಿಸಿಕೊಳ್ಳುವುದು ಕಾಪು ಕ್ಷೇತ್ರದ ಜನತೆಯ ಬಹುದೊಡ್ಡ ಕರ್ತವ್ಯ ಎಂದಿದ್ದಾರೆ. 
 
ಇನ್ನು ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿರುವ ಕುರಿತು ಪ್ರತಿಕ್ರಿಯಿಸಿ, ಮಾತನಾಡಿ  ಚುನಾವಣಾ ಸಂದರ್ಭದಲ್ಲಿ ವೈರಿಯನ್ನು ಹೊಗಳಿದ್ದು ಬಿಜೆಪಿ ಎಷ್ಟು ವೀಕ್ ಆಗಿದೆ ಅನ್ನೊದಕ್ಕೆ ದೊಡ್ಡ  ಉದಾಹರಣೆ ಆಗಿದೆ. ಇದರಿಂದ ಮೋದಿಯ ನಿಜವಾದ ಬಣ್ಣ ಬಯಲಾಗಿದೆ. ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಬೀತಿ ಎದುರಾಗಿದ್ದು ಎದುರಾಳಿಯನ್ನು ಹೊಗಳುವ ತಂತ್ರಗಾರಿಕೆ ನಡೆಸುತ್ತಿದೆ ಎಂದು ವಂಗ್ಯ ಮಾಡಿದ್ರು  .
 
ಸಮಾವೇಶದಲ್ಲಿ ಕಾಪು ಕ್ಷೇತ್ರದ ಅಭ್ಯರ್ಥಿ  ವಿನಯ್ ಕುಮಾರ್ ಸೊರಕೆ, ಪರ ಚಿತ್ರ ನಟ  ಸಾಧು ಕೋಕಿಲ, ಮಾತನಾಡಿದ್ರು, ಸೊರಕೆಯಂತಹ ಸಜ್ಜನ ರಾಜಕಾರಣಿ ಕಾಪು ಕ್ಷೇತ್ರಕ್ಕೆ ಸೊರಕೆ ಅವರಂತಹ ಜನನಾಯಕರು ಬೇಕು. ಕ್ಷೇತ್ರದ ಜನತೆ  ಸೊರಕೆ ಹಾಗೂ ಕಾಂಗ್ರೆಸ್‍ನ್ನು ಬಹು ಅಂತರದಲ್ಲಿ ಗೆಲ್ಲಿಸಲು ಸಹಾಕಾರ ನೀಡಬೇಕು ಎಂದ್ರು. ಸಮಾವೇಶದಲ್ಲಿ ಕಾಂಗ್ರೆಸ್  ಮುಖಂಡರಾದ ನವೀನ್ ಚಂದ್ರ ಶೆಟ್ಟಿ, ಯು. ಆರ್ ಸಭಾಪತಿ, ರಾಜಶೇಖರ್ ಕೋಟ್ಯಾನ್, ಜನಾರ್ಧನ ತೋನ್ಸೆ ಮೊದಲಾದವರು ಉಪಸ್ಥಿತರಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ