ಸಿಎಂ ಸಿದ್ದರಾಮಯ್ಯ ಬಜೆಟ್ ಇಂದು: ಎಷ್ಟು ಗಂಟೆಗೆ ಮಾಹಿತಿ ಇಲ್ಲಿದೆ

Krishnaveni K

ಶುಕ್ರವಾರ, 16 ಫೆಬ್ರವರಿ 2024 (09:33 IST)
Photo Courtesy: Twitter
ಬೆಂಗಳೂರು: ಕರ್ನಾಟಕ ಬಜೆಟ್ 2024 ಇಂದು ಮಂಡನೆಯಾಗಲಿದೆ. ದಾಖಲೆಯ 15 ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾರೆ.

ಇಂದು ಬೆಳಿಗ್ಗೆ 10.15 ಕ್ಕೆ ಬಜೆಟ್ ಮಂಡನೆಯಾಗಲಿದೆ. ಮುಂದಿನ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ  ಜನಪ್ರಿಯ ಬಜೆಟ್ ಮಂಡಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಸುಮಾರು 65,000 ಕೋಟಿ ರೂ. ಮೀಸಲಿಡುವ ಸಾಧ‍್ಯತೆಯಿದೆ.

ಇದು ಪೂರ್ಣಪ್ರಮಾಣದ ಬಜೆಟ್ ಆಗಿರಲಿದೆ. ಹೀಗಾಗಿ 12 ತಿಂಗಳ ಮಟ್ಟಿಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಡಬೇಕಿದೆ. ಜೊತೆಗೆ ಇದು ಕರ್ನಾಟಕ ರೂಪುಗೊಂಡು 50 ವರ್ಷವಾದ ಹಿನ್ನಲೆಯಲ್ಲಿ ಪ್ರತೀ ಇಲಾಖೆಗೂ ಒಂದೊಂದು ಯೋಜನೆ ಘೋಷಣೆಯಾಗುವ ಸಾಧ್ಯತೆಯಿದೆ.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತೆರಿಗೆ ಹೆಚ್ಚಳ ಮಾಡುವ ಸಾಧ‍್ಯತೆಯಿಲ್ಲ. ಬದಲಾಗಿ ಸಾಲದ ಮೊರೆ ಹೋಗುವ ಸಾಧ‍್ಯತೆಯಿದೆ. ರೈತರಿಗೆ ಶೂನ್ಯ ಬಡ್ಡಿ ದರದ ಸಾಲ 5 ಲಕ್ಷದಿಂದ 7 ಲಕ್ಷ ರೂ.ಗೆ ಏರಿಕೆಯಾಗುವ ಸಾಧ‍್ಯತೆಯಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಸಾಧ್ಯತೆಯಿಲ್ಲ. ಜೊತೆಗೆ ಬಜೆಟ್ ನಲ್ಲಿ ಕೇಂದ್ರದ ತೆರಿಗೆ ಹಂಚಿಕೆ ತಾರತಮ್ಯದ ಬಗ್ಗೆಯೂ ಪ್ರಸ್ತಾಪವಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ