ನವದೆಹಲಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸದೇ ಇರಲು ನಿರ್ಧರಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಯ್ ಬರೇಲಿ ಕ್ಷೇತ್ರದ ಜನತೆಗೆ ಭಾವುಕ ಪತ್ರ ಬರೆದಿದ್ದಾರೆ.
ಆರೋಗ್ಯ ಸಮಸ್ಯೆಯಿಂದಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸದೇ ಇರಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ. ಹೀಗಾಗಿ ಈ ಬಾರಿ ಅವರು ರಾಜಸ್ಥಾನ್ ನಿಂದ ರಾಜ್ಯ ಸಭೆಗೆ ಸ್ಪರ್ಧಿಸುತ್ತಿದ್ದಾರೆ. ನಿನ್ನೆ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.
ಇದೀಗ ತಾವು ಇಷ್ಟು ದಿನ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿ ಕ್ಷೇತ್ರದ ಜನತೆ ಧನ್ಯವಾದ ಸಲ್ಲಿಸವುದರ ಜೊತೆಗೆ ಸೋನಿಯಾ ಪತ್ರವೊಂದನ್ನು ಬರೆದಿದ್ದಾರೆ. ನನ್ನನ್ನು ಇಷ್ಟು ದಿನ ನೋಡಿಕೊಂಡಿದ್ದಕ್ಕೆ ಕೃತಜ್ಞಳಾಗಿದ್ದೇನೆ ಎಂದಿದ್ದಾರೆ.
ನಮ್ಮ ಸಂಬಂಧವು ತೀರಾ ಹಳೆಯದಾಗಿದೆ. ನನ್ನ ಅತ್ತೆಯಿಂದಾಗಿ ನಾನು ನಿಮ್ಮನ್ನು ಅದೃಷ್ಟಶಾಲಿಯಾಗಿದ್ದೇನೆ. ರಾಯ್ ಬರೇಲಿಯೊಂದಿಗೆ ನಮ್ಮ ಕುಟುಂಬದ ಸಂಬಂಧಗಳು ತುಂಬಾ ಆಳವಾಗಿದೆ. ಮಾವ ಫಿರೋಜ್ ಗಾಂಧಿ ಬಳಿಕ ಅತ್ತೆ ಇಂದಿರಾ ಗಾಂಧಿಯವರನ್ನು ನಿಮ್ಮವರಾಗಿ ಮಾಡಿಕೊಂಡಿದ್ದೀರಿ. ನನ್ನ ಅತ್ತೆಯನ್ನು ಮತ್ತು ನನ್ನ ಜೀವನ ಸಂಗಾತಿಯನ್ನು ಕಳೆದುಕೊಂಡ ನಂತರ ನಾನು ನಿಮ್ಮ ಬಳಿಗೆ ಬಂದೆ ಮತ್ತು ನೀವು ನನ್ನನ್ನು ನಿಮ್ಮ ತೋಳುಗಳಲ್ಲಿ ಭದ್ರ ಮಾಡಿಕೊಂಡಿರಿ. ಕಳೆದ ಎರಡು ಚುನಾವಣೆಗಳಲ್ಲಿ ಕಷ್ಟದ ಪರಿಸ್ಥಿತಿಯಲ್ಲೂ ನನ್ನ ಜೊತೆಗೆ ನಿಂತಿದ್ದಿರಿ. ನಾನು ಇಂದು ಏನಾಗಿದ್ದರೂ ನಿಮ್ಮಿಂದಲೇ ಎಂದು ಭಾವುಕ ಪತ್ರ ಬರೆದಿದ್ದಾರೆ.