‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಹೋಗಬೇಕಾದರೆ 5 ಹೆಣ ಬೀಳಬೇಕಾಯ್ತಾ?’

ಸೋಮವಾರ, 10 ಜುಲೈ 2017 (12:01 IST)
ಬೆಂಗಳೂರು: ರಾಜ್ಯ ಕಾನೂನು ಸುವ್ಯವಸ್ಥೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕರಾವಳಿ ಭಾಗದ ಪೊಲೀಸರಿಗೆ ಮಂಗಳಾರತಿಯಾಗಿದೆ.


‘ನಿಮಗಿಂತ ಬೆಂಗಳೂರು ಪೊಲೀಸರೇ ಪರವಾಗಿಲ್ಲ. ಅವರು ಘಟನೆಯಾದ ತಕ್ಷಣ ಸ್ಪಾಟ್  ಗಾದರೂ ಹೋಗುತ್ತಾರೆ. ನಿಮ್ಮಲ್ಲಿ ಎಸ್ ಪಿ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಹೋಗಬೇಕಾದರೆ 5 ಹೆಣ ಬೀಳಬೇಕಾಯ್ತೇನ್ರೀ..’ ಹೀಗಂತ ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಿಎಂ ಸಿದ್ದು ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನ ಐಜಿ ಮತ್ತು ಡಿಜಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಸಿಎಂ ಸಿದ್ದು, ಅಧಿಕಾರಿಗಳಿಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡರು. ನಾಟಕ ಮಾಡುವ ಯಾರನ್ನೂ ಬಿಡಲ್ಲ ಅಂತೀರಿ. ಮಾಧ್ಯಮಗಳ ಎದುರು ಅಪರಾಧಿಗಳನ್ನು ಬಂಧಿಸ್ತೀರಿ ಎಂದು ಪೋಸ್ ಕೊಡುತ್ತೀರಿ. ಹಾಗಿದ್ದ ಮೇಲೆ ಯಾಕ್ರೀ ಇನ್ನೂ ಅವರನ್ನು ಬಂಧಿಸಿಲ್ಲ ಎಂದು ಸಿಎಂ ಗರಂ ಆಗಿ ಪ್ರಶ್ನಿಸಿದರು.

ಕಳೆದ ಒಂದೂವರೆ ತಿಂಗಳಿನಿಂದ ಏನು ಮಾಡಿದ್ದೀರಿ? ಏನು ಕ್ರಮ ಕೈಗೊಂಡಿದ್ದೀರಿ ಎಲ್ಲಾ ಮಾಹಿತಿ ಕೊಡಿ ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಗೆ ಖಡಕ್ ಆಗಿ ಕೇಳಿದ್ದಾರೆ.

ಇದನ್ನೂ ಓದಿ.. ಬಂಟ್ವಾಳದ ಬಿಸಿಗೆ ಶಾಕ್  ಹೊಡೆಸಿಕೊಂಡ ಸಿಎಂ ಸಿದ್ದರಾಮಯ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ