ಮೋದಿ, ಶಾ ಬಂದು ಮಾಟ ಮಂತ್ರ ಮಾಡಕ್ಕಾಗಲ್ಲ: ಸಿಎಂ ಸಿದ್ದರಾಮಯ್ಯ ಟಾಂಗ್
‘ಮೋದಿ, ಶಾ ಬಂದು ಇಲ್ಲೇನು ಮಾಟ ಮಂತ್ರ ಮಾಡಕ್ಕಾಗಲ್ಲ. ಯಾರು ಬಂದರೂ, ಹೋದರೂ ಜನ ವೋಟು ಹಾಕೋರಿಗೇ ಹಾಕೋದು. ಅಮಿತ್ ಶಾ ಮೈಸೂರಿಗೆ ಬಂದಿದ್ದರಿಂದ ಏನಾಯ್ತು? ಬಿಜೆಪಿಯವರು ಬಿಜೆಪಿ ಪರ ಪ್ರಚಾರ ಮಾಡ್ತಾರೆ. ಜೆಡಿಎಸ್ ನವರು ಜೆಡಿಎಸ್ ಪರ ಪ್ರಚಾರ ಮಾಡ್ತಾರೆ. ಇದೆಲ್ಲಾ ಚುನಾವಣಾ ರಣತಂತ್ರ ಅಷ್ಟೇ. ಇದರಿಂದ ಯಾವುದೂ ಏನೂ ಆಗಲ್ಲ’ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ನಾಳೆಯಿಂದ ದಾವಣಗೆರೆಯಲ್ಲಿ ಪ್ರಚಾರ ಕಾರ್ಯ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ಚುನಾವಣೆ ಆದ್ದರಿಂದ ಎಲ್ಲಾ ಕಡೆ ಪ್ರಚಾರ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.