ಕನ್ನಡ ಸರಿಯಾಗಿ ಉಚ್ಛರಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಲೇವಡಿ
‘ಕುಂಡಲ ಸಂಗಮ ಅಲ್ಲ, ಅದು ಕೂಡಲ ಸಂಗಮ ಪ್ರಧಾನಿ ಅವರೇ. ಕನ್ನಡ ಪದವನ್ನು ತಪ್ಪಾಗಿ ಹೇಳುವುದು ದೊಡ್ಡ ವಿಷಯವಲ್ಲ. ಕನ್ನಡಿಗರು ಹೃದಯವಂತರು. ನಿಮ್ಮನ್ನು ಕ್ಷಮಿಸಿಯಾರು. ಆದರೆ ನಿಮಗೆ ಹೃದಯವಂತಿಕೆ ಇಲ್ಲ. ಇನ್ನೊಬ್ಬರ ತಪ್ಪನ್ನು ಆಡಿಕೊಂಡು ನಗುತ್ತೀರಿ’ ಎಂದು ಪ್ರಧಾನಿಗೆ ಸಿಎಂ ಟಾಂಗ್ ಕೊಟ್ಟಿದ್ದಾರೆ.
ಕೂಡಲ ಸಂಗಮ ಎಂದು ಹೇಳುವಾಗ ಕುಂಡಲ ಸಂಗಮ ಎಂದು ಲಿಂಗಾಯತರಿಗೆ ಪ್ರಧಾನಿ ಮೋದಿ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.