ಲಿಂಗಾಯಯತ ಪ್ರತ್ಯೇಕ ಧರ್ಮ: ವರಸೆ ಬದಲಿಸಿದ ಸಿಎಂ ಸಿದ್ದರಾಮಯ್ಯ
ಬುಧವಾರ, 26 ಜುಲೈ 2017 (11:18 IST)
ಬೆಂಗಳೂರು: ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂಬ ಕೂಗು ಜೋರಾಗುತ್ತಿದೆ. ಇದುವರೆಗೆ ಪ್ರತ್ಯೇಕ ಧರ್ಮಕ್ಕೆ ತಾವೇ ಶಿಫಾರಸ್ಸು ಮಾಡುತ್ತೇವೆ ಎಂದಿದ್ದ ಸಿಎಂ ಸಿದ್ದರಾಮಯ್ಯ ಇದೀಗ ತಮ್ಮ ವರಸೆ ಬದಲಿಸಿದ್ದಾರೆ.
‘ತನಗೆ ಪ್ರತ್ಯೇಕ ಧರ್ಮಕ್ಕೆ ಲಿಂಗಾಯತ ಸಮಾಜದ ನಾಯಕರಿಂದ ಮನವಿಯೇ ಬಂದಿಲ್ಲ. ಇನ್ನು, ಶಿಫಾರಸ್ಸು ಮಾಡುವ ಮಾತೆಲ್ಲಿ ಬಂತು? ಮೊದಲು ಮನವಿ ಬರಲಿ. ನಂತರ ನೋಡೋಣ’ ಎಂದು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ‘ಜಾತಿ ರಾಜಕಾರಣ ಮಾಡುವವರು ಬಿಜೆಪಿಯವರು. ಜಾತಿವಾದಿಗಳಿಗೆ ಜಾತಿ ಮಾಡ್ತಿದ್ದಾರೆ ಎಂದೇ ಅನಿಸುತ್ತೆ’ ಎಂದಿದ್ದಾರೆ.