ಸಿಎಂ ಸಿದ್ದರಾಮಯ್ಯರಿಂದ ಸೇಡಿನ ರಾಜಕಾರಣ : ಗೋ ಮಧುಸೂಧನ

ಶನಿವಾರ, 8 ಅಕ್ಟೋಬರ್ 2016 (18:49 IST)
ಮೈಸೂರಿನ ಪೊಲೀಸ್ ಅಧಿಕಾರಿ ದಯಾನಂದ ಅವರನ್ನು ವರ್ಗಾವಣೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಡು ತೀರಿಸಿಕೊಂಡಂತೇ ಕಾಣುತ್ತಿದೆ ಎಂದು ಬಿಜೆಪಿ ನಾಯಕ ಗೋ ಮಧುಸೂಧನ ಗಭೀರವಾಗಿ ಆರೋಪಿಸಿದ್ದಾರೆ.
 
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ರಾಜು ಕೊಲೆ ಆರೋಪಿಗಳನ್ನು ಪೊಲೀಸ್ ಅಧಿಕಾರಿ ದಯಾನಂದ ಬಂಧಿಸಿದ್ದರು. ಹೀಗಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ನಾಡಹಬ್ಬ ದಸರಾ ವೇಳೆ ದಯಾನಂದ ವರ್ಗಾವಣೆ ಸರಿಯಲ್ಲ. ಇದು ಪ್ರಮಾಣಿಕ ಅಧಿಕಾರಿಗಳ ಆತ್ಮವಿಶ್ವಾಸ ಕುಗ್ಗಿಸುತ್ತದೆ ಎಂದು ಹೇಳಿದರು.
 
ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಾಮ್‌ಲಾಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ಕೆ.ಎಸ್.ಈಶ್ವರಪ್ಪ ನಡುವೆ ಮಾತುಕತೆ ನಡೆಸಿ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿದ್ದಾರೆ ಎಂದು ಹೇಳಿದರು. 
 
ಇನ್ನೂ ಮುಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಇರುವುದಿಲ್ಲ. ಸದ್ಯದಲ್ಲೇ ಇಬ್ಬರು ನಾಯಕರು ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಲಿದ್ದಾರೆ. ಮುಂದೆ ರಾಜ್ಯ ಬಿಜೆಪಿ ಪಾಳಯದಲ್ಲಿ ಯಾವುದೇ ಗೊಂದಲ ಇರುವುದಿಲ್ಲ ಎಂದು ಬಿಜೆಪಿ ನಾಯಕ ಗೋ ಮಧುಸೂಧನ್ ವಿಶ್ವಾಸ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ