ಲೆಹರ್ ಸಿಂಗ್ ಡೈರಿಯ ಬಗ್ಗೆ ಏನು ಹೇಳುತ್ತೀರಿ? ಸಹಾರಾ ಡೈರಿ ಬಗ್ಗೆ ಪ್ರಸ್ತಾಪಿಸುವುದಿಲ್ಲ, ಕೇವಲ ಗೋವಿಂದರಾಜು ಡೈರಿ ಪ್ರಸ್ತಾಪಿಸುವುದು ಯಾಕೆ ಎಂದು ಪ್ರಶ್ನಿಸಿದರು. ತಾಕತ್ತಿದ್ರೆ ಸದನದಲ್ಲಿ ಎಲ್ಲಾ ಡೈರಿಗಳ ಬಗ್ಗೆ ಚರ್ಚೆಯಾಗಲಿ ಎಂದು ಸವಾಲ್ ಹಾಕಿದರು.
ಮುಖ್ಯಮಂತ್ರಿ, ಸಚಿವರು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸುವ ನೀವು, ಮೊದಲು ನೀವು ಸರಕಾರದಲ್ಲಿದ್ದಾಗ ಬಹ್ಮಾಂಡ ಭ್ರಷ್ಟಾಚಾರ ಮಾಡಿರುವುದನ್ನು ನೆನಪಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.