ಇಂದು ರೇಣುಕಾಚಾರ್ಯ ನಿವಾಸಕ್ಕೆ ಸಿಎಂ ಭೇಟಿ

ಬುಧವಾರ, 9 ನವೆಂಬರ್ 2022 (11:33 IST)
ದಾವಣಗೆರೆ : ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರನ ಸಾವು ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಅದರಲ್ಲೂ ಕೊಲೆ ಮಾಡಿ ಚಾನಲ್ ನಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಚಂದ್ರು ತಂದೆ ರಮೇಶ್ ಕೂಡ ಈಗಾಗಲೇ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಆದರೆ ಸರ್ಕಾರದ ಅವಿಭಾಜ್ಯ ಅಂಗವಾಗಿರುವ ರೇಣುಕಾಚಾರ್ಯ ಅವರೇ ಪೊಲೀಸ್ ತನಿಖೆ ಮೇಲೆ ಅನುಮಾನ ಗೊಂಡಿದ್ದಾರೆ. ಕೊಲೆಗಾರರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ, ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ