ಎಡದಂಡೆ ನಾಲಾ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿದ್ದು, ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿಬರುತ್ತಿದೆ.
ಮಂಡ್ಯ ಜಿಲ್ಲೆಯ ಹೇಮಾವತಿ ಎಡದಂಡೆ ನಾಲಾ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿರೋ ಶಂಕೆ ವ್ಯಕ್ತವಾಗಿದೆ.
ಕಳಪೆ ಕೆಲಸ ನಡೆಸಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿರುವ ಉಪ್ಪಾರ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಮಾಜಿ ಶಾಸಕ ಡಾ.ನಾರಾಯಣಗೌಡ ಆಗ್ರಹ ಮಾಡಿದ್ದಾರೆ.
ಕಳಪೆ ಕಾಮಗಾರಿ ನಡೆಸಿ ಕೋಟ್ಯಾಂತರ ರೂಪಾಯಿ ಹಣ ಗುಳುಂ ಮಾಡಿರುವ ಎಂಜಿನಿಯರ್ ಗಳು ಮತ್ತು ಗುತ್ತಿಗೆದಾರರು. ಗುಣಮಟ್ಟದ ಕಾಮಗಾರಿ ನಡೆಸದೇ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿ 400ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಗುತ್ತಿಗೆದಾರ ನುಂಗಿಹಾಕಿದ್ದಾರೆ ಎಂದು ದೂರಿದ್ದಾರೆ.
ಈ ಹಿಂದೆ ಕೃಷ್ಣರಾಜಪೇಟೆ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿ ಪ್ರಭಾರದಲ್ಲಿದ್ದ ಚನ್ನರಾಯಪಟ್ಟಣ ಸೂಪರಿಂಟೆಂಡೆಂಟ್ ಎಂಜಿನಿಯರ್ ಮೋಹನರಾಜ ಅರಸ್ ಹಗರಣದ ಸೂತ್ರಧಾರಿಯಾಗಿದ್ದಾರೆ.
800ಕೋಟಿ ರೂಪಾಯಿಗಳ ವೆಚ್ಚದ ನಾಲಾ ಆಧುನೀಕರಣ ಕಾಮಗಾರಿ ಗುತ್ತಿಗೆಯನ್ನು ಪಡೆದಿರುವ ಉಪ್ಪಾರ್ ಕಂಪನಿಯೇ ಅಧಿಕಾರಿಗಳನ್ನು ಒಳಹಾಕಿಕೊಂಡು ಕಳಪೆ ಕಾಮಗಾರಿ ನಡೆಸಿ ಹಗರಣ ನಡೆಸಿರುವ ಬಗ್ಗೆ ಸ್ಥಳೀಯ ರೈತಮುಖಂಡರು ಮತ್ತು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.