ಸಿಎಂ ರಾಜೀನಾಮೆ ಅಸ್ತ್ರಕ್ಕೆ ಆಪ್ತರ ಮುಲಾಮು
ಇದು ಅವರ ಆಪ್ತ ವಲಯದಲ್ಲಿ ತಲ್ಲಣ ಮೂಡಿಸಿತು. ತಕ್ಷಣವೇ ಅವರ ಆಪ್ತ ಸಚಿವರಾದ ಆರ್. ಅಶೋಕ್, ರೇಣುಕಾಚಾರ್ಯ ಮುಂತಾದವರು ಸಿಎಂ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ. ಇದರ ಬಳಿಕ ಈ ಸಚಿವರು ಯಾವುದೇ ಕಾರಣಕ್ಕೂ ಯಡಿಯೂರಪ್ಪನವರ ನಾಯಕತ್ವದಲ್ಲಿ ಬದಲಾವಣೆ ಬೇಡ. ಅವರಿಲ್ಲದೇ ರಾಜ್ಯ ಬಿಜೆಪಿಯಿಲ್ಲ ಎಂದು ಅಪಸ್ವರ ಎತ್ತಿದವರಿಗೆ ತಿರುಗೇಟು ಕೊಟ್ಟಿದ್ದಾರೆ. ಇನ್ನು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ಹೈಕಮಾಂಡ್ ಮುಂದೆ ನಾಯಕತ್ವ ಬದಲಾವಣೆ ಪ್ರಸ್ತಾವನೆಯೇ ಇಲ್ಲ ಎಂದು ವಿವಾದಕ್ಕೆ ತೆರೆ ಎಳೆಯುವ ಯತ್ನ ನಡೆಸಿದ್ದಾರೆ.