ಡಿಸಿ ರೋಹಿಣಿ ಸಿಂಧೂರಿಗೆ ಸಾರ್ವಜನಿಕರ ಬೆಂಬಲ

ಶನಿವಾರ, 5 ಜೂನ್ 2021 (08:46 IST)
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಸಸ್ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಜಟಾಪಟಿ ಪ್ರಕರಣದಲ್ಲಿ ರಾಜಕೀಯ ನಾಯಕರೂ ಎಂಟ್ರಿಯಾಗಿದ್ದಾರೆ. ರೋಹಿಣಿ ಸಿಂಧೂರಿ ವರ್ಗಾವಣೆಗೆ ರಾಜಕೀಯ ನಾಯಕರಿಂದ ಒತ್ತಡ ಕೇಳಿಬಂದಿದೆ.


ಈ ನಡುವೆ ಖಡಕ್ ಜಿಲ್ಲಾಧಿಕಾರಿ ಎಂದೇ ಪರಿಚಿತರಾಗಿದ್ದ ರೋಹಿಣಿ ಸಿಂಧೂರಿಗೆ ನೆಟ್ಟಿಗರಿಂದ ಬೆಂಬಲ ವ್ಯಕ್ತವಾಗಿದೆ. ರೋಹಿಣಿ ಸಿಂಧೂರಿ ಭ್ರಷ್ಟರ ವಿರುದ್ಧ ಹೋರಾಟಕ್ಕಿಳಿದಿದ್ದಕ್ಕೇ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅವರ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ.

ರೋಹಿಣಿ ಸಿಂಧೂರಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಭೂ ಮಾಫಿಯಾ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಕ್ಕೆ ಅವರ ಮೇಲೆ ಗೂಬೆ ಕೂರಿಸಿ ವರ್ಗಾವಣೆಗೆ ಈ ನಾಟಕ ಮಾಡಲಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ವಿವಾದ ಉಪಶಮನ ಮಾಡಲು ಪ್ರಯತ್ನ ನಡೆಸಿದ ಸಚಿವ ಎಸ್ ಟಿ ಸೋಮಶೇಖರ್ ಕೂಡಾ ಇದು ನನ್ನ ವ್ಯಾಪ್ತಿ ಮೀರಿದೆ ಎಂದು ಅಸಹಾಯಕರಾಗಿ ಕೈ ಚೆಲ್ಲಿ ಕುಳಿತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಶಿಲ್ಪಾ ನಾಗ್ ರಾಜೀನಾಮೆ ಅಂಗೀಕರಿಸಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ