ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗುತ್ತಿದೆ: ಬೊಮ್ಮಾಯಿ

ಶನಿವಾರ, 9 ಅಕ್ಟೋಬರ್ 2021 (19:54 IST)
ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಲ್ಲಿದ್ದಲ್ಲು ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಕೇಂದ್ರ ಗಣಿ ಸಚಿವರನ್ನು ಭೇಟಿ ಮಾಡಿ, ನಮ್ಮ ಬೇಡಿಕೆಗಳನೆಲ್ಲಾ ಅವರ ಬಳಿ ಹೇಳಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಒಟ್ಟು ನಮಗೆ 10 ರ್ಯಾಟ್ ಕಲ್ಲಿದ್ದಲು ಬರ್ತಿದೆ. ಅದನ್ನು 14 ರ್ಯಾಟ್ ಗೆ ಏರಿಕೆ ಮಾಡಿದ್ರೆ ನಮಗೆ ಸರಿ ಹೋಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎರಡ್ಮೂರು ಮೈನಿಂಗ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ಕೊಟ್ಟಿದ್ದಾರೆ ಒಟ್ಟಾರೆ ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನ್ ವಿಚಾರದ ಕುರಿತು ಮಾತಾನಾಡಿದ ಅವರು, ಮೊದಲನೇ ಡೋಸ್ ಈಗಾಗಲೇ 81% ವರೆಗೆ ಇದೆ .ನಮ್ಮ ಗುರಿ ಡಿಸೆಂಬರ್ ಒಳಗೆ 90% ವರೆಗೆ ಕಂಪ್ಲೀಟ್ ಮಾಡಬೇಕು ಅದಕ್ಕೆ ಕೇಂದ್ರ ಆರೋಗ್ಯ ಸಚಿವರು ಸಹಕಾರ ಕೊಡ್ತೀನಿ ಅಂತ ಹೇಳಿದ್ದಾರೆ ಇದೇ ರೀತಿ ಎರಡನೇ ಡೋಸ್ ಕೂಡ 38% ಇದೆ. ಅದನ್ನು 70% ಗೆ ಹೆಚ್ಚು ಮಾಡಬೇಕು ಅಂತ ಇದ್ದಿವಿ. ಇಡೀ ಕರ್ನಾಟಕದ ಜನಸಂಖ್ಯೆಯನ್ನು ವ್ಯಾಕ್ಸಿನೇಷನ್ ಅಡಿಯಲ್ಲಿ ತರಬೇಕು. ಅದು ಕೂಡ ಈ ವರ್ಷದ ಅಂತ್ಯದಲ್ಲಿ ತರಬೇಕೆಂಬ ಪ್ಲ್ಯಾನ್ ಇದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ