ಬಿಟ್ ಕಾಯಿನ್ ಪ್ರಕರಣ ಇನ್ನೊಂದು ಕಡೆ ವಲಸಿಗರಿಗೆ ವಿಶೇಷ ಮನ್ನಣೆ ಹಾಕುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆಗೆ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಎದ್ದಿದೆ.ಹೀಗಾಗಿಯೇ ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ದಿನ ಕಳೆದಂತೆ ಬಿಜೆಪಿ ಮೇಲೆ ಮುಗಿ ಬೀಳುತ್ತಿದ್ದರೂ ಸಿಎಂ ಅವರನ್ನು ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಮರ್ಥಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಕೆಲವರು ಮೌನಕ್ಕೆ ಶರಣಾಗಿದ್ದರೆ, ಇನ್ನು ಕೆಲವರು ಗೊತ್ತಿದ್ದರೂ ಗೊತ್ತಿಲ್ಲದಂತೆ ತೆರೆಮರೆಯಲ್ಲಿ ಆಟ ನೋಡುತ್ತಿದ್ದಾರೆ.