2021ರಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆಯ ಪ್ರಚಾರಕ್ಕೆ ಬಿಜೆಪಿ ಪಕ್ಷ ಬರೋಬ್ಬರಿ ₹252 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು,ಈ ಪೈಕಿ ಶೇ. 60ರಷ್ಟು ಹಣವನ್ನು ಕೇವಲ ಪಶ್ಚಿಮ ಬಂಗಾಳ ರಾಜ್ಯ ಒಂದಕ್ಕೇ ಖರ್ಚು ಮಾಡಿದೆ ಎಂಬ ಅಚ್ಚರಿಯ ವಿಚಾರ ಬಯಲಾಗಿದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಖರ್ಚು ವೆಚ್ಚದ ಬಗ್ಗೆ ಚುನಾವಣಾ ಆಯೋಗಕ್ಕೆ ನೀಡಿದ ವರದಿಯಲ್ಲಿ ಸ್ವತಃ ಬಿಜೆಪಿ ಪಕ್ಷವೇ ಈ ಮಾಹಿತಿಯನ್ನು ತಿಳಿಸಿದೆ. ಕಳೆದ ಮೇ ತಿಂಗಳಿನಲ್ಲಿ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಈ ವೇಳೆ ಅಧಿಕಾರದ ಗದ್ದುಗೆಗೆ ಏರಲು ಬಿಜೆಪಿ ಪಕ್ಷ ಭಾರೀ ಮೊತ್ತ ವ್ಯಯಿಸಿದೆ. ಕೇರಳ ರಾಜ್ಯದಲ್ಲೂ ಚುನಾವಣೆಗಾಗಿ ಭಾರೀ ಮೊತ್ತವನ್ನು ಬಿಜೆಪಿ ವ್ಯಯಿಸಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಚುನಾವಣಾ ಖರ್ಚಿನ ಲೆಕ್ಕಪತ್ರದಲ್ಲಿ ಬಿಜೆಪಿ ಈ ವಿಷಯವನ್ನು ಬಹಿರಂಗಪಡಿಸಿದೆ.