ನಾಗರಬಾವಿಯಲ್ಲಿ ಎರಡು ಆಂತಸ್ತಿನ ಮನೆಯ ನಿವಾಸಿಗಳಿಗೆ ಶುರುವಾಯ್ತು ಭಯ

ಭಾನುವಾರ, 10 ಅಕ್ಟೋಬರ್ 2021 (20:46 IST)
ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಎಡಬಿಡ್ಡದೆ ಮಳೆ ಸುರಿತ್ತಿದೆ . ಮಳೆಯಿಂದ ಜನರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗ್ತಿದೆ. ಪ್ರತಿದಿನ ನಗರದಲ್ಲಿ ಒಂದಲ್ಲ ಒಂದು ಅವಘಡವಾಗ್ತಲ್ಲೇ ಇದೆ. ಹಾಗೆ ಈ ಹಿಂದೆ ನಗರದಲ್ಲಿ ಮನೆ ಕುಸಿತ, ಮನೆ ವಾಲಿದ ಘಟನೆ ಕೂಡ ನಡೆದಿತ್ತು. ಇನ್ನೂ ಇಂದು  ನಗರದ ನಾಗರಬಾವಿಯಲ್ಲಿ ಮನೆ ಕಂಪೌಂಡ್ ಕುಸಿತ ಉಂಟಾಗಿ ಜನರಿಗೆ ಇನ್ನಿಲ್ಲದ ಆತಂಕ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಒಂದು ಸೈಟ್ , ಮನೆ ಕಟ್ಟಬೇಕು ಅನ್ನುವುದು ಪ್ರತಿಯೊಬ್ಬರ ಆಸೆ , ಕನಸು ಆಗಿರುತ್ತೆ, ಹಾಗೆ ಬಿಡಿಎ ಗೆ ಹಣಕೊಟ್ಟು ಸೈಟ್ ತಗೊಂಡು ಮನೆಯನ್ನ ಕಟ್ಟಿಸಿದ್ದಾರೆ. ಅದು ಸ್ವಲ್ಪವು ಜಾಗ ಬಿಡದಂತೆ ಮನೆ ಕಟ್ಟಿದ್ದಾರೆ . ಈಗ ನೋಡಿದ್ರೆ ಮನೆಯಿಂದ ನೀರುಗಾಲುವೆಯಿಂದ ಮನೆಯ ಕಾಂಪೌಂಡ್ ಗೋಡೆ ಕುಸಿದಿದೆ. ನೀರುಗಾಲುವೆ ಇರುವ ಜಾಗದಲ್ಲಿ ಅಂತರ ಬಿಟ್ಟು ಮನೆ ಕಟ್ಟಬೇಕಾಗುತ್ತೆ. ಆದ್ರೆ ಇಲ್ಲಿ ಜಾಗ ಬಿಡದೇ ಎರಡು ಆಂತಸ್ತಿನ ಮನೆ ಕಟ್ಟಿದ್ದಾರೆ , ನೋಡಿದ್ರೆ ಮನೆ ಕಂಪೌಂಡ್ ಗೋಡೆ ಮಳೆಯಿಂದ , ನೀರುಗಲುವೆಯಿಂದ ಮನೆ ಕುಸಿದಿದೆ.ಇನ್ನೂ ಈ ಹಿಂದೆ ನಾಗರಬಾವಿಯಲ್ಲಿ ಮನೆ ವಾಲಿದ ಘಟನೆ ನಡೆದಿತ್ತು. ಆದ್ರೆ ಈಗ ಕಂಪೌಂಡ್ ಗೋಡೆಯ ಕಟ್ಟಡಕ್ಕೆ ಹಾನಿಯಾಗಿದೆ. ಬೃಹತ್ ನೀರುಗಾಲುವೆಗೆ ಕಟ್ಟಿದ್ದ  ಮನೆಯ ಹಿಂಬಂದಿಯ ಕಾಂಪೌಂಡ್ ಕುಸಿತ ಉಂಟಾಗಿದೆ. ಹತ್ತು ವರ್ಷದ ಹಿಂದೆ ಕಟ್ಟಡವನ್ನ ನಿರ್ಮಾಣ ಮಾಡಲಾಗಿತ್ತು. ಕೃಷ್ಣ ಎನ್ನುವವರಿಗೆ ಸೇರಿದ ಮನೆ  ಇದ್ದಾಗಿದ್ದು,ಕಳಪೆ‌ ಕಾಮಗಾರಿಯಿಂದ ಕಾಂಪೌಂಡ್ ಕುಸಿದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದ್ರೆ ಈಗ ಕಂಪೌಂಡ್ ಗೋಡೆ ಕುಸಿತದಿಂದ ಮನೆಯಲ್ಲಿ ವಾಸ ಮಾಡುವವರಿಗೆ ಆತಂಕ ಶುರುವಾಗಿದೆ.ಈಗ ಹೀಗಾಗಿರುವ ಘಟನೆಯಂದ ಗಾಬರಿಗೊಂಡ ಮನೆ ಮಾಲೀಕ ಕೃಷ್ಣ ಮನೆಗೆ ಡ್ಯಾಮೇಜ್ ಆಗಬಹುದು ಎಂದು ಆತಂಕ ವ್ಯಕ್ತಪಡಿಸ್ತಿದ್ದಾರೆ
 
ಮನೆಯ ಮಾಲೀಕ ಕೃಷ್ಣ ನಿರ್ಮಾಣವಾಗಿರುವ ಕಟ್ಟಡವನ್ನ ಖರೀದಿಸಿದ್ರು.ಕಾಂಪೌಂಡ್ ಕುಸಿತದಿಂದ ಆತಂಕಕ್ಕೆ ಒಳಗಾದ ಕಟ್ಟಡದ ನಿವಾಸಿಗಳು ಮನೆಗೂ ತೊಂದರೆಯಾಗಬಹುದು ಎಂದು ಭಯಬೀತಗೊಂಡಿದ್ದಾರೆ . ಇನ್ನೂ ಅಕ್ಕಪಕ್ಕದಲ್ಲಿ ವಾಸಮಾಡುವ ಜನರು ಕೂಡ ಈಗ ಆತಂಕಕ್ಕೆ ಒಳಗಾಗಿದ್ದಾರೆ. ಯಾವುದೇ ಅಧಿಕಾರಿ ಸುಳಿದಿಲ್ಲ. ಇದರ ನೇರ ಹೊಣೆ ಬಿಡಿಎ ನೇ ಹೊರಬೇಕು , ಬಿಡಿಎ ನಿರ್ಲಕ್ಷ್ಯದಿಂದಲೇ ಈ ರೀತಿ ಘಟನೆ ಆಗಿರುವುದು ಎಂದು ಸ್ಥಳೀಯರು ಅಸಾಮಾಧಾನ ಹೊರಹಾಕಿದ್ರು.ಒಟ್ನಲ್ಲಿ ಗ್ರಾಹಚರ ಕೆಟ್ರೆ ಬದನೆಕಾಯಿ ಕೂಡ ದೇವ ಆಗುತ್ತೆ ಅನ್ನುವ ಗಾದೆಯಂತೆ ಪರಿಸ್ಥಿತಿ ಆಗಿದೆ. ಆದ್ರೆ ಇಲ್ಲಿ ಯಾರದ್ದು ತಪ್ಪೋ? ಯಾರದ್ದು ಒಪ್ಪೋ ಅನ್ನೋದು ಲೆಕ್ಕಕೇ ಬರುವುದಿಲ್ಲ . ಜನರ ಜೀವ ಮುಖ್ಯವಾಗುತ್ತೆ ಹೀಗಾಗಿ ಸಂಬಂಧಪಟ್ಟ  ಅಧಿಕಾರಿಗಳು , ಬಿಡಿಎ ಎಚ್ಚೇತ್ತಕೊಂಡು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ