ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಬಗ್ಗೆಯೂ ತೀರ್ಮಾನ : ಹೆಚ್ ಡಿ ಕೆ

ಶನಿವಾರ, 18 ಫೆಬ್ರವರಿ 2023 (20:31 IST)
ಶೀಘ್ರದಲ್ಲೇ ಜೆಡಿಎಸ್ ಎರಡನೇ ಲಿಸ್ಟ್ ರಿಲೀಸ್ ಆಗಲಿದ್ದು, ಕಾಂಗ್ರೆಸ್-ಬಿಜೆಪಿ ಫಸ್ಟ್ ಲಿಸ್ಟ್ ಗೂ ಮುನ್ನವೇ ನಮ್ಮ ಪಟ್ಟಿ ರಿಲೀಸ್ ಆಗುತ್ತದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ಈ ಬಗ್ಗೆ  ಮಾತನಾಡಿದ  ಅವರು,ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳುತ್ತೇವೆ...ಪಟ್ಟಿಯಲ್ಲಿ ಯಾವೇ ಗೊಂದಲವಿಲ್ಲ. ದೇವೇಗೌಡರ ಅನುಮತಿ, ಪಕ್ಷದ ಪ್ರಮುಖರ ಒಪ್ಪಿಗೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತದೆ. ಇನ್ನೊಂದು ವಾರದಲ್ಲಿ ಎಲ್ಲವೂ ಬಗೆಹರಿಯುತ್ತೆ  ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.....ಇನ್ನು ಇದೆ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಹ ಪ್ರತಿಕ್ರಿಯೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ