ಜೋಶಿ ವಿರುದ್ದ ಹೆಚ್ ಡಿ ಕೆ ಗರಂ
ಸಿಡಿ ಯಾತ್ರೆ ಎಂದು ಬಿಜೆಪಿ ಅವರು ಇಟ್ಟುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗೆ ಟಾಂಗ್ ನೀಡಿದ್ದಾರೆ.ಪಂಚರತ್ನ ಅಲ್ಲಾ ನವಗ್ರಹ ಎಂದು ಜೆಡಿಎಸ್ ನವರು ಹೆಸರು ಇಟ್ಟುಕೊಳ್ಳಬೇಕು ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರಲ್ಹಾದ್ ಜೋಶಿ ಅವರು ನಮ್ಮ ಪಕ್ಷದ ನಾಯಕರ ಸಿಡಿ ಸಂಕಲ್ಪ ಎಂದು ಹೆಸಿರಿಟ್ಟು ಯಾತ್ರೆ ಮಾಡಲಿ. ಸಿಡಿ ಯಾತ್ರೆ ಎಂದು ಇಟ್ಟುಕೊಳ್ಳಲಿ, ಅವಾಗ ನಾವು ನವಗ್ರಹ ಯಾತ್ರೆ ಎಂದು ಬದಲಾವಣೆ ಮಾಡಿಕೊಳ್ಳುತ್ತೇವೆ, ಇನ್ನೂ ಕೇಂದ್ರ ಮಂತ್ರಿಯಾಗಿ ಉತ್ತರ ಕರ್ನಾಟಕಕ್ಕೆ ಜೋಶಿ ಅವರು ಏನು ಕೊಡುಗೆ ಕೊಟ್ಟಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇಲ್ಲ. ಕುಟುಂಬದಲ್ಲಿ ಅಧಿಕಾರದ ಸ್ಥಾನಕ್ಕಾಗಿ ಆಸೆ ಇದ್ದೇ ಇರುತ್ತೇ. ಅವುಗಳನ್ನೆಲ್ಲವನ್ನು ನಾವು ಕೂತು ಚರ್ಚೆ ಮಾಡುತ್ತೇವೆ ಎಂದು ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.